ನವದೆಹಲಿ, ಮೇ 31 (Daijiworld News/MB) : ಕಾಶ್ಮೀರದಲ್ಲಿ ಭದ್ರತಾ ಪಡೆ ಉಗ್ರರನ್ನು ಹೊಡೆದುರುಳಿಸುತ್ತಲ್ಲೇ ಇದ್ದು ಈಗ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ವಾನ್ಪೊರಾ ಪ್ರಾಂತ್ಯದಲ್ಲಿ ಮತ್ತಿಬ್ಬರು ಉಗ್ರರನ್ನು ಹೊಡೆದುರುಳಿಸಿದೆ.
ಉಗ್ರರು ಅಡಗಿರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ ಭದ್ರತಾ ಪಡೆ ಶುಕ್ರವಾರ ರಾತ್ರಿಯೇ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ವಾನ್ಪೊರಾ ಪ್ರಾಂತ್ಯದಲ್ಲಿ ಉಗ್ರರ ಮೇಲೆ ದಾಳಿ ನಡೆಸಿ ಶರಣಾಗುವಂತೆ ತಿಳಿಸಿದ್ದು ಉಗ್ರರು ಶರಣಾಗಲು ಒಪ್ಪದೆ ಗುಂಡಿನ ದಾಳಿ ನಡೆಸಿದರು. ಉಗ್ರರ ಕುಟುಂಬಸ್ಥರನ್ನು ಕರದೊಯ್ದು ಶರಣಾಗುವಂತೆ ತಿಳಿಸಿದರು ಉಗ್ರರು ಗುಂಡಿನ ದಾಳಿ ನಡೆಸಿದ್ದು ಈ ಸಂದರ್ಭದಲ್ಲಿ ಎನ್ಕೌಂಟರ್ ಮಾಡುವುದು ಅನಿವಾರ್ಯವಾಯಿತು ಎಂದು ಜಮ್ಮು ಮತ್ತು ಕಾಶ್ಮೀರದ ಇನ್ಸ್ಪೆಕ್ಟರ್ ಜನರಲ್ ವಿಜಯ್ ಕುಮಾರ್ ಹೇಳಿದ್ದಾರೆ.
ಶನಿವಾರ ಇಬ್ಬರು ಹಿಜ್ಬುಲ್ ಮುಜಾಹಿದೀನ್ನ ಉಗ್ರರನ್ನು ಭದ್ರತಾ ಪಡೆ ಹತ್ಯೆ ಮಾಡಿದೆ.