ಅಹಮದಾಬಾದ್, ಮೇ 31 (DaijiworldNews/PY) : ಮಧ್ಯಪ್ರಾಚ್ಯದಿಂದ ಬಂದ ಮಿಡತೆಗಳು ಮಧ್ಯಪ್ರದೇಶ, ಪಂಜಾಬ್, ರಾಜಸ್ಥಾನದ ಹಲವು ಭಾಗಗಳಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವಂತೆ ರೈತರು ಅವುಗಳನ್ನು ಓಡಿಸಲು ಹರಸಾಹಸ ಪಡುತ್ತಿದ್ದಾರೆ. ಮಿಡತೆಗಳನ್ನ ಓಡಿಸಲು ಮೊಬೈಲ್ನಲ್ಲಿ ಡಿಜೆ ಸೌಂಡ್ಗಳನ್ನು ಹಾಕುವುದು, ಡ್ರಮ್ ಬಾರಿಸುವುದು, ದೊಡ್ಡದಾದ ಶಬ್ದ ಬರುವಂತಹ ವ್ಯವಸ್ಥೆ ಮಾಡುತ್ತಿದ್ದಾರೆ.
ಸದ್ಯ ಮಿಡತೆಗಳನ್ನು ಓಡಿಸಲು ರಾಜಸ್ಥಾನ, ಗುಜರಾತ್, ಪಂಜಾಬ್, ಮಹಾರಾಷ್ಟ್ರ ಸರಕಾರಗಳು ಏರಿಯಲ್ ಸ್ಪ್ರೆಯರ್ಗಳಲ್ಲಿ ಸ್ಪ್ರೆ ಮಾಡುತ್ತಿವೆ. ಬ್ರಿಟನ್ನಿಂದ ಇವುಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಇವುಗಳಿಗೆ ರಾಸಾಯನಿಕಗಳನ್ನು ಹಾಕಿ ಮಿಡತೆಗಳು ಅತೀ ಹೆಚ್ಚಿರುವ ಪ್ರದೇಶಗಳಲ್ಲಿ ಸ್ಪ್ರೇ ಮಾಡಲಾಗುತ್ತಿದೆ.
ಇದರ ಜೊತೆ ರೈತರು ಸ್ಥಳೀಯವಾಗಿ ಮಿಡತೆಗಳನ್ನು ಓಡಿಸುವ ಉಪಾಯಗಳನ್ನು ಮಾಡುತ್ತಿದ್ದು, ಮೊಬೈಲ್ನಲ್ಲಿ ಡಿಜೆ ಸೌಂಡ್ಗಳನ್ನು ಹಾಕುವುದು, ಡ್ರಮ್ ಬಾರಿಸುವುದು ಮುಂತಾದ ವ್ಯವಸ್ಥೆ ಮಾಡುತ್ತಿದ್ದಾರೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಉತ್ತರ ಪ್ರದೇಶದ ಪೊಲೀಸರು, ವಾಹನವೊಂದರಲ್ಲಿ ಡಿಜೆ ವ್ಯವಸ್ಥೆ, ದೊಡ್ಡ ಸ್ಪೀಕರ್ ಇಟ್ಟುಕೊಂಡು ಊರಿಡೀ ತಿರುಗುತ್ತಿದ್ದಾರೆ.
1812ರಿಂದ 1889ರವರೆಗೆ ಮತ್ತು 1896ರಿಂದ 1897ರವರೆಗೆ ಭಾರತದಲ್ಲಿ ಇಂತಹ ಮಿಡತೆಗಳ ದಾಳಿ ಆಗಿವೆ ಎಂದು ಹೇಳಲಾಗಿದೆ. 1926ರಿಂದ 1931ರ ಸಂದರ್ಭದಲ್ಲೂ ಮಿಡತೆ ದಾಳಿಯಾಗಿತ್ತು. ಆ ವೇಳೆ ಸುಮಾರು 2 ಕೋಟಿ ರೂ. ಮೊತ್ತದ ಬೆಳೆ ಹಾನಿಯಾಗಿತ್ತು. ದೆಹಲಿಯಲ್ಲಿ1939ರಲ್ಲಿ ಮಿಡತೆ ದಾಳಿ ಎಚ್ಚರಿಕೆ ಸಂಸ್ಥೆಯನ್ನೂ ಸ್ಥಾಪನೆ ಮಾಡಲಾಗಿತ್ತು. ಇದರ ಉಪ ಕಚೇರಿ ಕರಾಚಿಯಲ್ಲಿತ್ತು.