ಮುಂಬೈ, ಜೂ. 01 (Daijiworld News/MB) : ಬಾಲಿವುಡ್ನ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ (42) ಸೋಮವಾರ ಮುಂಜಾನೆ ಅಸ್ತಂಗತರಾಗಿದ್ದಾರೆ.
ಈ ಬಗ್ಗೆ ಸಂಗೀತ ನಿರ್ದೇಶಕ ಸಲೀಂ ಮರ್ಚೆಂಟ್ ಸುದ್ದಿ ಸಂಸ್ಥೆಯೊಂದಕ್ಕೆ, ಅವರಿಗೆ ಹಲವು ಆರೋಗ್ಯ ಸಮಸ್ಯೆ ಇದ್ದು ಕಿಡ್ನಿ ಸಮಸ್ಯೆಯಿಂದ ಕಿಡ್ನಿ ಕಸಿ ಮಾಡಲಾಗಿತ್ತು. ಆದರೆ ಇತ್ತೀಚೆಗೆ ಕಿಡ್ನಿಯಲ್ಲಿ ಇನ್ಫೆಕ್ಷನ್ ಕಾಣಿಸಿಕೊಂಡಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು, ಹಾಗೆಯೇ ಕಳೆದ ನಾಲ್ಕು ದಿನಗಳಿಂದ ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು. ಕಿಡ್ನಿಯಲ್ಲಿನ ಇನ್ಫೆಕ್ಷನ್ ಮತ್ತಷ್ಟು ಹೆಚ್ಚಾಯಿತು ಎಂದು ತಿಳಿಸಿದ್ದಾರೆ.
ವಾಜಿದ್ ಅವರ ಸಾವಿನ ಸುದ್ದಿಯನ್ನು ಗಾಯಕ ಸೋನು ನಿಗಮ್ ತಮ್ಮ ಇನ್ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ.
ಇನ್ನು ಸಿನಿಮಾ ಪತ್ರಕರ್ತ ಫರಿದೂನ್ ಶಹರ್ಯಾರ್, ವಾಜಿದ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು ಎಂದು ಸೋನು ನಿಗಮ್ ಹೇಳಿದ್ದಾರೆ ಎಂದು ಟ್ವೀಟ್ ಮಾಡಿದ್ದು ಈ ನಡುವೆ ಫರಿದೂನ್, ಇದು ಬಹಳ ದುಖಃದ ಸಂಗತಿ ಸಾಜಿದ್- ವಾಜಿದ್ ಜೋಡಿಯ ಸಂಗೀತ ನಿರ್ದೇಶಕ ವಾಜಿದ್ ಇನ್ನಿಲ್ಲ ಎಂದು ಗಾಯಕ ಸೋನು ನಿಗಮ್ ಹೇಳಿದ್ದಾರೆ. ಅವರಿಗೆ ಕೋವಿಡ್-19 ರೋಗ ಇತ್ತು ಎಂದು ಹೇಳಿದ್ದಾರೆ.
ತಬಲಾ ವಾದಕ ಉಸ್ತಾದ್ ಶರಾಫತ್ ಅಲಿ ಖಾನ್ ಅವರ ಪುತ್ರ ಸಾಜಿದ್, ಸೂಫಿ ಮತ್ತು ಬಾಲಿವುಡ್ ಸಂಗೀತದಲ್ಲಿ ನಿಪುಣರಾಗಿದ್ದು ತನ್ನ ಸಹೋದರ ಸಾಜಿದ್ ಜತೆ ಸೇರಿ ಹಲವಾರು ಸಿನಿಮಾಗಳಿಗೆ ಸಂಗೀತ ನಿರ್ದೇಶಿಸಿದ್ದ ಇವರು ಸಾಜಿದ್- ವಾಜಿದ್ ಜೋಡಿ ಎಂದೇ ಖ್ಯಾತರಾಗಿದ್ದರು.
1998ರಲ್ಲಿ ಸಲ್ಮಾನ್ ಖಾನ್ ನಟನೆಯ 'ಪ್ಯಾರ್ ಕೀಯಾ ತೋ ಡರ್ನಾ ಕ್ಯಾ' ಎಂಬ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡುವ ಮೂಲಕ ಬಾಲಿವುಡ್ಗೆ ಪ್ರವೇಶಿಸಿದ್ದ ಅವರು ದಬಾಂಗ್, ಚೋರಿ ಚೋರಿ, ಹಲೋ ಬ್ರದರ್, ವಾಂಟೆಡ್, ಮುಜ್ಸೇ ಶಾದೀ ಕರೋಗಿ ಮೊದಲಾದ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ವಾಜಿದ್ ನಿಧನಕ್ಕೆ ಸಂತಾಪ ಸೂಚಿಸಿ ಸಿನಿಮಾರಂಗದ ಕಲಾವಿದರು ಟ್ವಿಟರ್ನಲ್ಲಿ ಸಂತಾಪ ಸೂಚಿಸಿದ್ದಾರೆ.