ನವದೆಹಲಿ, ಜೂ. 01 (Daijiworld News/MB) : ವೀಸಾ ಅಧಿಕಾರಿಗಳ ಸೋಗಿನಲ್ಲಿ ಪಾಕಿಸ್ತಾನದ ಬೇಹುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ದೆಹಲಿ ಪೊಲೀಸರ ವಿಶೇಷ ತಂಡ ಭಾನುವಾರ ವಶಕ್ಕೆ ಪಡೆದಿದೆ.
ವಶಕ್ಕೆ ಪಡೆದ ಇವರನ್ನು ಐಎಸ್ಐ ಬೇಹುಗಾರರಾಗಿದ್ದಪಾಕಿಸ್ತಾನದ ಶೇಖ್ಪುರ್ ನಿವಾಸಿ ಅಬಿದ್ ಹುಸೇನ್ ಮತ್ತು ಪಾಕಿಸ್ತಾನದ ಇಸ್ಲಾಮಾಬಾದ್ ತಾಹೀರ್ ಖಾನ್ ಎಂದು ಗುರುತಿಸಲಾಗಿದೆ.
ಗುಪ್ತಚರ ಇಲಾಖೆಯ ಮಾಹಿತಿಯ ಮೇರೆಗೆ ಇವರ ಮೇಲೆ ಕಣ್ಣಿಡಲಾಗಿದ್ದು ಇವರು ಭಾರತೀಯ ಭದ್ರತಾ ವ್ಯವಸ್ಥೆಯ ಮಾಹಿತಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ವ್ಯಕ್ತಿಯನ್ನು ಭೇಟಿಯಾಗುತ್ತಿದ್ದ ಸಂದರ್ಭದಲ್ಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಇವರನ್ನು ಪೊಲೀಸರ ವಶಕ್ಕೆ ಪಡೆಯಲಾಗಿದ್ದು ದೆಹಲಿ ಪೊಲೀಸರ ವಿಶೇಷ ತಂಡ ಮತ್ತು ಇತರ ಸಂಸ್ಥೆಗಳು ಇವರನ್ನು ವಿಚಾರಣೆ ನಡೆಸಿದೆ.
ಮತ್ತೋರ್ವ ವ್ಯಕ್ತಿ ಪಾಕಿಸ್ತಾನ ಭಕ್ಕರ್ ನಿವಾಸಿ ಜಾವೇದ್ ಹುಸೇನ್ ಎಂಬವನಾಗಿದ್ದು ಇವರು ಆತನಿಗೆ 15 ಸಾವಿರ ಹಾಗೂ ಐಫೋನ್ ನೀಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಅಬೀದ್ ಮತ್ತು ತಾಹೀರ್ ಇಬ್ಬರು ನಕಲಿ ಆಧಾರ್ ಕಾರ್ಡ್ ಹೊಂದಿದ್ದು ತಾವು ಭಾರತೀಯ ಪ್ರಜೆಗಳು ಎಂದು ಹೇಳುತ್ತಿದ್ದರು ಎಂದು ವಿಚಾರಣೆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದು ಅವರನ್ನು ವ್ಯಕ್ತಿತ್ವ ರಹಿತರು ಎಂದು ಘೋಷಿಸಲಾಗಿದ್ದು 24 ಗಂಟೆಯೊಳಗೆ ದೇಶವನ್ನು ತೊರೆಯುವಂತೆ ಆದೇಶಿಸಲಾಗಿದೆ.