ನವದೆಹಲಿ, ಜೂ 01 (DaijiworldNews/PY) : ಜೂನ್ 1ರ ವೇಳಾಪಟ್ಟಿಯ ಅನುಸಾರ 200 ರೈಲುಗಳು ಸಂಚರಿಸಲಿದ್ದು, ಮೊದಲ ದಿನದಂದೇ ಸುಮಾರು 1.45 ಲಕ್ಷ ಮಂದಿ ಪ್ರಯಾಣ ಬೆಳೆಸಲಿದ್ದಾರೆ.
ಸಾಂದರ್ಭಿಕ ಚಿತ್ರ
ಮಹಾರಾಷ್ಟ್ರದ ಹಲವು ಪ್ರದೇಶಗಳನ್ನು ಕೆಂಪು ವಲಯವೆಂದು ಗುರುತಿಸಿರು ಕಾರಣ ಆ ರಾಜ್ಯವನ್ನು ಹೊರತುಪಡಿಸಿ ಉಳಿದ ರೈಲುಗಳ ನಿಲುಗಡೆಗೆ ಅವಕಾಶ ನೀಡಲಾಗಿದೆ.
ರೈಲು ಹೊರಡುವ 90 ನಿಮಿಷಕ್ಕೂ ಮೊದಲೇ ಈ ಎಲ್ಲಾ ಪ್ರಯಾಣಿಕರು ನಿಲ್ದಾಣದಲ್ಲಿ ಇರಬೇಕು. ಅಲ್ಲದೇ, ಆರೋಗ್ಯ ತಪಾಸಣೆ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಆರೋಗ್ಯ ಸೇತು ಆ್ಯಪ್ ಅಳವಡಿಸಿಕೊಳ್ಳುವುದು ಕಡ್ಡಾಯ. ಮನೆಯಿಂದಲೇ ಪ್ರಯಾಣಿಕರು ಆಹಾರ ಹಾಗೂ ನೀರು ತರಬೇಕು ಎಂದು ಭಾರತೀಯ ರೈಲ್ವೆ ಇಲಾಖೆ ಸೂಚಿಸಿದೆ.
ಜೂನ್ 1 ರಿಂದ 30ರವರೆಗೆ ಸುಮಾರು 26 ಲಕ್ಷ ಮಂದಿ ಪ್ರಯಾಣಿಕರು ಸೀಟು ಕಾಯ್ದಿರಿಸಿದ್ದು, ಇದರೊಂದಿಗೆ ಹೆಚ್ಚುವರಿಯಾಗಿ ವಿಶೇಷ ರಾಜಧಾನಿ ಹಾಗೂ ಶ್ರಮಿಕ್ ರೈಲುಗಳು ಸಂಚರಿಸಲಿವೆ.