ನವದೆಹಲಿ, ಜೂ 01 (DaijiworldNews/PY) : ವಾಸ್ತವ ನಿಯಂತ್ರಣ ರೇಖೆ ಸಮೀಪದ ನೆಲೆಗಳಿಗೆ ಯುದ್ದ ವಾಹನಗಳ ಮೂಲಕ ವಾಹನಗಳು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ಚೀನಾ ಸಾಗಿಸಿದ್ದು, ಭಾರತೀಯ ಸೇನೆ ಕೂಡಾ ಇದಕ್ಕೆ ಸರಿಸಮಾನವಾದ ರೀತಿಯಲ್ಲೇ ಸಿದ್ದತೆಗಳನ್ನು ಮಾಡಿದೆ.
ಸಾಂದರ್ಭಿಕ ಚಿತ್ರ
ಸೇನೆ ಹಾಗೂ ರಾಜತಾಂತ್ರಿಕ ಮಟ್ಟದಲ್ಲಿ ಗಡಿ ವಿವಾದವನ್ನು ಇತ್ಯರ್ಥಗೊಳಿಸುವುದಾಗಿ ಉಭಯ ದೇಶಗಳೂ ಹೇಳಿಕೆ ನೀಡಿದ್ದರೂ, ಗಡಿಯಲ್ಲಿ ಮಾತ್ರ ಸೇನಾ ಚಟುವಟಿಕೆಗಳು ಬಿರುಸುಗೊಂಡಿರುವುದಾಗಿ ವರದಿಯಾಗಿದೆ.
ಭಾರತ ಹಾಗೂ ಚೀನಾ ಪಡೆಗಳು ಲಡಾಖ್ನ ಪೂರ್ವ ಭಾಗದಲ್ಲಿನ ವಿವಾದಿತ ಪ್ರದೇಶದ ಸಮೀಪದ ನೆಲೆಗಳಲ್ಲಿ ಯುದ್ಧ ವಾಹನಗಳು ಹಾಗೂ ಭಾರೀ ಉಪಕರಣಗಳನ್ನು ನಿಯೋಜಿಸಿವೆ. ಭಾರತೀಯ ವಾಯು ಪಡೆ ಸಹ ವಿವಾದಿತ ಪ್ರದೇಶದ ಮೇಲೆ ನಿರಂತರವಾಗಿ ನಿಗಾ ವಹಿಸಿದೆ.
ಸಾಮಾಜಿ ಜಾಲತಾಣದಲ್ಲಿ ಪೂರ್ವ ಲಡಾಖ್ನಲ್ಲಿ ಚೀನಾ ಮತ್ತು ಭಾರತ ಸೇನೆಗಳ ನಡುವೆ ಘರ್ಷಣೆ ನಡೆದಿದೆ ಎಂಬಂತೆ ಹರಿದಾಡುತ್ತಿರುವ ವಿಡಿಯೋ ವಾಸ್ತವವಲ್ಲ, ಸದ್ಯ ಗಡಿಯಲ್ಲಿ ಇರುವ ಸನ್ನಿವೇಶಕ್ಕೆ ಕಲ್ಪಿಸಿ ವಿಡಿಯೋವನ್ನು ತಿರುಚಲಾಗಿದೆ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನೈಜವಾದುದಲ್ಲ. ಅಂಥ ಘಟನೆ ನಡೆದಿಲ್ಲ ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ.