ನವದೆಹಲಿ, ಜೂ. 01 (Daijiworld News/MB) : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲ್ಲೇ ಇದ್ದು , ಒಂದೇ ದಿನ 8,380 ಮಂದಿಯಲ್ಲಿ ಕೊರೊನಾ ವೈರಸ್ ಇರುವುದು ದೃಢಪಟ್ಟಿದ್ದು 230 ಮಂದಿ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 190535 ಕ್ಕೆ ಏರಿಕೆಯಾಗಿದ್ದು 5394 ಮಂದಿ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. 91819 ಮಂದಿ ಸೋಂಕಿತರು ಗುಣಮುಖರಾಗಿದ್ದು 93322 ಪ್ರಕರಣಗಳು ಸಕ್ರಿಯವಾಗಿದೆ.
ಇದೀಗ ಭಾರತವೂ ವಿಶ್ವದಲ್ಲಿ ಟಾಪ್ 10 ಕೊರೊನಾ ಪೀಡಿತ ರಾಷ್ಟ್ರಗಳ ಪೈಕಿ 7ನೇ ಸ್ಥಾನಕ್ಕೆ ಏರಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೊರೋನಾ ವರ್ಲ್ಡೋಮೀಟರ್ಸ್ ವೆಬ್'ಸೈಟ್ ತಿಳಿಸಿವೆ.
ದೇಶದಲ್ಲೇ ಅಧಿಕ ಕೊರೊನಾ ಪ್ರಕರಣಗಳು ದೃಢಪಟ್ಟಿರುವ ಮಹಾರಾಷ್ಟ್ರದಲ್ಲಿ 67655 ಮಂದಿಗೆ ಕೊರೊನಾ ಸೋಂಕು ತಗುಲಿದ್ದು ಈ ಪೈಕಿ 2286 ಕೊರೊನಾಗೆ ಬಲಿಯಾಗಿದ್ದಾರೆ. 29329
ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು 36040 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನವದೆಹಲಿಯಲ್ಲಿ 19844, ತಮಿಳುನಾಡಿನಲ್ಲಿ 22333, ಕರ್ನಾಟಕದಲ್ಲಿ 3221, ಗುಜರಾತ್ನಲ್ಲಿ 16779, ಮಧ್ಯಪ್ರದೇಶದಲ್ಲಿ 8089, ರಾಜಸ್ತಾನದಲ್ಲಿ 8831 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.