ನವದೆಹಲಿ,ಜೂ 01 (Daijiworld News/MSP) : ಕೊರೊನಾ ವೈರಸ್ ಅದೃಶ್ಯ ಶತ್ರುವಾಗಿದ್ದು ಆದರೆ ನಮ್ಮ ಆರೋಗ್ಯ ಯೋಧರು, ವೈದ್ಯಕೀಯ ಕಾರ್ಯಕರ್ತರು ಅಜೇಯರಾಗಿದ್ದಾರೆ. ಅಜೇಯರ ವಿರುದ್ಧ ಅದೃಶ್ಯ ಯುದ್ಧದಲ್ಲಿ, ನಮ್ಮ ವೈದ್ಯಕೀಯ ಕಾರ್ಯಕರ್ತರು ಗೆಲ್ಲುವುದು ಖಚಿತ" ಎಂದು ಪ್ರಧಾನಿ ಹೇಳಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕರ್ನಾಟಕ 25 ನೇ ಸಂಸ್ಥಾಪನಾ ದಿನ ಅಂಗವಾಗಿ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ, "ಎರಡನೇ ವಿಶ್ವ ಯುದ್ಧಗಳ ಬಳಿಕ ಜಗತ್ತು ಒಂದು ಮಹಾ ಬಿಕ್ಕಟ್ಟನ್ನು ಎದುರಿಸುತ್ತಿದೆ. ಮಹಾ ಯುದ್ದದ ಬಳಿಕ ಪ್ರಂಪಚ ಬದಲಾದಂತೆ COVID-19 ವೈರಸ್ ನ ಪೂರ್ವ ಮತ್ತು ನಂತರದ ಪ್ರಪಂಚವು ವಿಭಿನ್ನವಾಗಿರುತ್ತದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಜಗತ್ತು ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿ ಮತ್ತು ವೈಜ್ಞಾನಿಕ ಸಮುದಾಯವನ್ನು ಭರವಸೆ ಮತ್ತು ಕೃತಜ್ಞತೆಯಿಂದ ನೋಡುತ್ತಿದೆ ಎಂದರು.
ಪ್ರಪಂಚವು ಪೂರ್ವ ಮತ್ತು ನಂತರದ ಯುದ್ಧಗಳನ್ನು ಬದಲಾಯಿಸಿದಂತೆ , ಅದೇ ರೀತಿಯಲ್ಲಿ, ಪೂರ್ವ ಮತ್ತು ನಂತರದ COVID ಪ್ರಪಂಚವು ವಿಭಿನ್ನವಾಗಿರುತ್ತದೆ. ಅಂತಹ ಸಮಯದಲ್ಲಿ ಜಗತ್ತು ನಮ್ಮ ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿ ಮತ್ತು ವೈಜ್ಞಾನಿಕ ಸಮುದಾಯವನ್ನು ಭರವಸೆ ಮತ್ತು ಕೃತಜ್ಞತೆಯಿಂದ ನೋಡುತ್ತಿದೆ ಎಂದರು.
ರಾಜ್ಯದ COVID-19 ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ನೇತೃತ್ವದ ಕರ್ನಾಟಕ ಸರ್ಕಾರದ ಪ್ರಯತ್ನಗಳನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.