ಕೊಲಂಬೊ, ಜೂ 01 (DaijiworldNews/PY) : ಸಮುದ್ರ ಸೇತು ಕಾರ್ಯಾಚರಣೆಯ ಎರಡನೇ ಹಂತದ ಅಡಿಯಲ್ಲಿ 700 ಭಾರತೀಯರೊಂದಿಗೆ ಭಾರತೀಯ ನೌಕಾಪಡೆಯ ಹಡಗು ಐಎನ್ಎಸ್ ಜಲಶ್ವಾ ಭಾರತಕ್ಕೆ ಪ್ರಯಾಣ ಬೆಳೆಸಲಿದೆ.
ಸೋಮವಾರ ಬೆಳಗ್ಗೆ ಈ ಹಡಗು ಕೊಲಂಬೊ ಬಂದರಿಗೆ ತಲುಪಿದ್ದು, ತಮಿಳುನಾಡಿನ ಟುಟಿಕೋರಿನ್ಗೆ ಪ್ರಯಾಣಿಕರೊಂದಿಗೆ ತೆರಳಲಿದೆ. ನಂತರ ಮಾಲ್ಡೀವ್ಸ್ನಿಂದ ಮತ್ತೆ ತಮಿಳುನಾಡಿನ ಟ್ಯುಟಿಕೋರಿನ್ಗೆ 700 ಪುರುಷರನ್ನು ಬಿಟ್ಟು ಬರಲಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
ಐಎನ್ಎಸ್ ಜಲಶ್ವಾ ಕಾರ್ಯನಿರ್ವಾಹಕ ಅಧಿಕಾರಿ ಕಮಾಂಡರ್ ಗೌರವ್ ದುರ್ಗಪಾಲ್ ಮಾತನಾಡಿ, ಕೊರೊನಾ ವಿರುದ್ದದ ಸುರಕ್ಷತೆಗಾಗಿ ಮಾರ್ಗಸೂಚಿಗಳನ್ನು ಹಾಗೂ ಅದಕ್ಕಾಗಿ ನೌಕಾ ಕೇಂದ್ರ ಕಚೇರಿ ಹಾಗೂ ಕಮಾಂಡರ್ಗಳು ಕೈಗೊಳ್ಳಬೇಕಾಗಿರುವ ಕ್ರಮಗಳನ್ನು ಪ್ಕಟಿಸುತ್ತೇವೆ ಎಂದು ಹೇಳಿದ್ದಾರೆ.
ಸದ್ಯದ ಅವಶ್ಯಕತೆಗಳಾದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಆರೋಗ್ಯ ಶಿಷ್ಟಾಚಾರಗಳನ್ನು ಕಾಯ್ದುಕೊಳ್ಳುವ ಮೂಲಕ ಹಡಗನ್ನು ನಿರ್ದಿಷ್ಟವಾಗಿ ಕೆಂಪು, ಕಿತ್ತಳೆ ಹಾಗೂ ಹಸಿರು ವಲಯಗಳೆಂದು ವಿಂಗಡಿಸಲಾಗಿದೆ.
ಬಂದರು ಒಡ್ಡು ಸೇವೆಯ ಮೂಲಕ ಉಭಯಚರ ಸಾರಿಗೆ ಡಾಕ್ ಕೊಲಂಬೋದಲ್ಲಿ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಆರಂಭಿಸಲಿದ್ದು, ಇದು ಹಡಗಿನಲ್ಲಿ ಸ್ಥಳಾಂತರಿಸುವವರಿಗೆ ಅನುಕೂಲವಾಗಲಿದೆ.
ಸ್ಥಳಾಂತರ ಮಾಡುವ ಉದ್ದೇಶದಿಂದ ಸಂಪೂರ್ಣ ಹಡಗನ್ನು ಮೂರು ವಲಯಗಳಾಗಿ ವಿಂಗಡಿಸಲಾಗಿದ್ದು, ಕೆಂಪು ವಲಯವು ನಾವು ಸ್ಥಳಾಂತರಿಸುವ ಎಲ್ಲರಿಗೂ ಸ್ಥಳಾವಕಾಶ ಕಲ್ಪಿಸುವ ಪ್ರದೇಶವಾಗಿದೆ. ಕಿತ್ತಳೆ ವಲಯವು ಜನರನ್ನು ಸ್ಥಳಾಂತರಿಸುವ ಬಗ್ಗೆ ಕಾಳಜಿ ವಹಿಸಲು ಮೀಸಲಾದ ತಂಡಕ್ಕಾಗಿದ್ದು, ಹಸಿರು ವಲಯವು ಅಧಿಕಾರಿಗಳು ಹಾಗೂ ನಾವಿಕರು ಉಳಿದುಕೊಂಡಿರುವುದಕ್ಕಾಗಿ ಎಂದು ಮಾಹಿತಿ ನೀಡಿದ್ದಾರೆ.