ಮುಂಬೈ, ಜೂ. 01 (Daijiworld News/MB) : ದೇಶದಲ್ಲೇ ಕೊರೊನಾ ಪ್ರಕರಣಗಳು ಅಧಿಕವಾಗಿ ದೃಢಪಟ್ಟಿರುವ ಮಹಾರಾಷ್ಟ್ರದಲ್ಲಿ ಜೂನ್ ತಿಂಗಳಿನಲ್ಲೇ ಶಾಲೆಗಳನ್ನು ಪ್ರಾರಂಭ ಮಾಡಲು ಮುಖ್ಯಮತ್ರಿ ಉದ್ಧವ್ ಠಾಕ್ರೆಯವವರು ಸೂಚನೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಉದ್ಧವ್ ಠಾಕ್ರೆಯವವರು, ಗೂಗಲ್ ಕ್ಲಾಸ್ ರೂಮ್ ಕ್ಲಾಸ್ ರೂಮ್ ಸೇರಿದಂತೆ ಆನ್ಲೈನ್ ಹಾಗೂ ಆಫ್ಲೈನ್ ತರಗತಿಗಳನ್ನು ಆರಂಭಿಸಿ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಶಾಲೆ ಜೂನ್ ಮೊದಲ ವಾರದಲ್ಲೇ ಆರಂಭವಾಗಲಿದ್ದು ಜೂನ್ 15 ರಿಂದ ಮಕ್ಕಳಿಗೆ ಪುಸ್ತಕವನ್ನು ವಿತರಿಸಲಾಗುವುದು. ರೇಡಿಯೋ, ಟಿವಿ, ಆನ್ಲೈನ್ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತದೆ ಎಂದು ವರದಿ ತಿಳಿಸಿದೆ.
ಇನ್ನು ಆನ್ಲೈನ್ ತರಗತಿ ನಡೆಸಲು ಗೂಗಲ್ ಕೂಡ ಸಮ್ಮತಿ ನೀಡಿದ್ದು ಹಂತಹಂತವಾಗಿ ಶಾಲೆಗಳನ್ನು ತೆರೆಯಲಾಗುತ್ತದೆ. ಮೇವರೆಗೆ ಪ್ರಸಕ್ತ ವರ್ಷವನ್ನು ವಿಸ್ತರಿಸಲಾಗುತ್ತದೆ. ಹಬ್ಬಗಳ ರಜೆಯನ್ನು ಕಡಿತ ಮಾಡಲಾಗುತ್ತದೆ. ಮಕ್ಕಳು ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಹೇಳಿದ್ದಾರೆ.