ನವದೆಹಲಿ, ಜೂ 01 (Daijiworld News/MSP): ಮೇ ತಿಂಗಳಲ್ಲಿ ಭಾರೀ ಇಳಿಕೆ ಕಂಡಿದ್ದ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಜೂನ್ ಮೊದಲ ದಿನವೇ ಏರಿಕೆ ಕಂಡಿದೆ. ತೈಲ ಮಾರುಕಟ್ಟೆ ಕಂಪನಿಗಳು (ಹೆಚ್'ಪಿ, ಬಿಪಿಸಿಎಲ್, ಐಒಸಿ) ಸಬ್ಸಿಡಿ ರಹಿತ ಎಲ್'ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತೀ ಸಿಲಿಂಡರ್'ಗೆ ರೂ.12 ಹೆಚ್ಚಿಸಿದೆ.
ಜೂನ್, 2020ಕ್ಕೆ ಎಲ್ ಪಿಜಿಯ ಅಂತರರಾಷ್ಟ್ರೀಯ ಬೆಲೆಯಲ್ಲಿ ಏರಿಕೆ ಆಗಿದೆ. ಹಾಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಹೆಚ್ಚಿರುವುದರಿಂದ ಚಿಲ್ಲರೆ ಮಾರಾಟ ದರದಲ್ಲೂ ಏರಿಕೆ ಆಗಿದೆ ಎಂದು ಐಒಸಿ ತಿಳಿಸಿದೆ.
ರಾಷ್ಟ್ರ ರಾಜಧಾನಿದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್'ಪಿಜಿ ಸಿಲಿಂಡರ್ ಬೆಲೆ ರೂ.593ಕ್ಕೆ ಏರಿಕೆಯಾಗಿದೆ. ಈ ಹಿಂದೆ ಮೇ ತಿಂಗಳಿನಲ್ಲಿ ಇದೇ ಸಿಲಿಂಡರ್ ಬೆಲೆ ರೂ.581.50 ಇತ್ತು.
ಇನ್ನು ಕೋಲ್ಕತಾದಲ್ಲಿ ರೂ.616 ಮುಂಬೈನಲ್ಲಿ 590.50 ಮತ್ತು ಚೆನ್ನೈನಲ್ಲಿ ರೂ.606.50 ಆಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 19 ಕೆಜಿ ಎಲ್'ಪಿಜಿ ಸಿಲಿಂಡರ್ ಬೆಲೆ ಕೂಡ ಏರಿಕೆಯಾಗಿದ್ದು, ಇಂದಿನಿಂದ ಹೊಸ ದರಗಳು ಜಾರಿಗೆ ಬರಲಿವೆ.