ಹಾವೇರಿ, ಜೂ 01 (DaijiworldNews/PY) : ನಾನು ಪರಿಶಿಷ್ಠ ಜಾತಿಯ ಬಲಗೈ ಮುಖಂಡ. ರಾಜ್ಯದಲ್ಲಿ ಬಲಗೈ ಸಮುದಾಯಕ್ಕೆ ಇದುವರೆಗೂ ಸಿಕ್ಕಿಲ್ಲ. ಮುಖ್ಯಮಂತ್ರಿಗಳು ನಮ್ಮ ಸಮುದಾಯಕ್ಕೆ ಅವಕಾಶ ನೀಡುತ್ತೇನೆ ಎಂದು ಹೇಳಿರುವುದಾಗಿ ಎಂದು ಬಿಜೆಪಿಯ ಹಾವೇರಿ ಶಾಸಕ ನೆಹರು ಓಲೇಕಾರ್ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಸಚಿವ ಸ್ಥಾನ ನೀಡಲಿಲ್ಲ ಎಂದು ಬಿಎಸ್ವೈ ಅವರನ್ನು ಕೆಳಗೆ ಇಳಿಸ್ತೀವಿ ಎಂದು ಕೆಲವರು ಆಂತರಿಕವಾಗಿ ಹೇಳುತ್ತಾರೆ. ಆದರೆ ಈ ವಿಷಯವನ್ನು ಯಾರೂ ಬಹಿರಂಗವಾಗಿ ಹೇಳುತ್ತಿಲ್ಲ. ಸಂಪುಟದಲ್ಲಿ ಹಿರಿಯ ನಾಯಕರಿಗೆ ಸ್ಥಾನ ನೀಡಿ. ಅಸಮರ್ಥರನ್ನು ಕೈಬಿಡಬೇಕು. ಉಮೇಶ್ ಕತ್ತಿಯವರಿಗೂ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗಲಿದೆ. ಅಧಿಕಾರ ಬೇಕೆಂದಾಗ ಭಿನ್ನಾಭಿಪ್ರಾಯ ಉಂಟಾಗೋದು ಸಹಜ ಎಂದು ತಿಳಿಸಿದರು.
ಪಕ್ಷದಲ್ಲಿಯ ಹಿರಿಯರು ಉಂಟಾಗಿರುವ ಭಿನ್ನಾಭಿಪ್ರಾಯಗಳನ್ನು ಶಮನ ಮಾಡುತ್ತಾರೆ. ನಾನು ಪರಿಶಿಷ್ಠ ಜಾತಿಯ ಬಲಗೈ ಮುಖಂಡ. ಇದುವರೆಗೂ ರಾಜ್ಯದಲ್ಲಿ ಬಲಗೈ ಸಮುದಾಯಕ್ಕೆ ಸಿಕ್ಕಿಲ್ಲ. ನಮ್ಮ ಸಮುದಾಯಕ್ಕೆ ಅವಕಾಶ ನೀಡುತ್ತೇನೆ ಮುಖ್ಯಮಂತ್ರಿಗಳು ಎಂದು ಹೇಳಿದ್ದಾರೆ. ಸಚಿವರಾಗಲು ಎಲ್ಲರೂ ನಾನಾ ತಂತ್ರಗಳನ್ನು ಮಾಡುತ್ತಿದ್ದು, ಇದು ಹೊರಕ್ಕೆ ಭಿನ್ನಾಭಿಪ್ರಾಯದ ರೀತಿ ಕಾಣುತ್ತದೆ. ಎಲ್ಲವೂ ಹಿರಿಯರ ಮಧ್ಯಸ್ಥಿಕೆಯಲ್ಲಿ ಶಮನವಾಗಲಿದೆ ಎಂದು ಹೇಳಿದರು.