ಶಿವಮೊಗ್ಗ, ಜೂ 01 (DaijiworldNews/PY) : ಟಿವಿಯಲ್ಲಿ ಬರುತ್ತಿರುವ ಸಭೆಯ ದೃಶ್ಯಗಳು ತುಂಬಾ ಹಳೆಯದಾಗಿದೆ. ಹಾಗಾಗಿ ಯಾವ ಗುಂಪುಗಾರಿಕೆಯೂ ಬಿಜೆಪಿಯಲ್ಲಿ ಇಲ್ಲ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ನಮಗೆ ಮಾತು ಕೊಟ್ಟಂತೆ ಸಚಿವ ಸ್ಥಾನ ನೀಡಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.
ಶಿವಮೊಗ್ಗಕ್ಕೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಯಾವುದೇ ರೀತಿಯಾದ ಬಂಡಾಯವೂ ಇಲ್ಲ. ಗುಂಪುಗಾರಿಕೆಯೂ ಇಲ್ಲ. ಸಿಎಂ ಬಿಎಸ್ವೈ ಅವರು ನಮಗೆ ಕೊಟ್ಟ ಮಾತಿನ ಪ್ರಕಾರ ಸಚಿವ ಸ್ಥಾನ ನೀಡಿದ್ದಾರೆ. ಶಿಸ್ತಿನಿಂದ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ನಮ್ಮೊಂದಿಗೆ ಬಿಜೆಪಿಗೆ ಸೇರಿದ ಇನ್ನು ಮೂವರು ಅರ್ಹ ಶಾಸಕರಿಗೆ ಕೂಡಾ ಸಚಿವ ಸ್ಥಾನ ನೀಡುವಂತೆ ಮಾನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ,
9 ವಿಧಾನಪರಿಷತ್ ಹಾಗೂ 4 ರಾಜ್ಯಸಭಾ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ವಿವಿಧ ಸಮಾಜದವರು ಸಹಜವಾಗಿಯೇ ತಮಗೆ ಟಿಕೆಟ್ ನೀಡಿ ಎಂದು ಒತ್ತಡ ಹಾಗೂ ಮನವಿ ಮಾಡುತ್ತಿದ್ದಾರೆ. ಬದಲಾಗಿ ಇದೇನೂ ಹೊಸದಲ್ಲ ಎಂದಿದ್ದಾರೆ.