ಮಲಪ್ಪುರಂ, ಜೂ. 02 (Daijiworld News/MB) : ಆನ್ಲೈನ್ ತರಗತಿಯಲ್ಲಿ ಹಾಜರಾಗಲು ಯಾವುದೇ ಸೌಲಭ್ಯವಿಲ್ಲ ಎಂಬ ಕಾರಣಕ್ಕೆ ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ವಾಲಂಚೇರಿ ಎಂಬಲ್ಲಿ ಸಂಭವಿಸಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ವೀಲಾಚೆರಿ ಬಳಿಯ ಮಂಗೇರಿ ನಿವಾಸಿ ಬಾಲಕೃಷ್ಣನ್ ಮತ್ತು ಶೀಬಾ ಅವರ ಪುತ್ರಿ ದೇವಿಕಾ (14) ಎಂದು ಗುರುತಿಸಲಾಗಿದೆ.
ದೇವಿಕಾ ಇರಿಂಬಿಳಿಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯಾಗಿದ್ದು ಲಾಕ್ಡೌನ್ ಇರುವ ಕಾರಣದಿಂದಾಗಿ ಆನ್ಲೈನ್ ತರಗತಿ ನಡೆಸಲಾಗಿತ್ತು. ಆದರೆ ಆನ್ಲೈನ್ನಲ್ಲಿ ತರಗತಿಗೆ ಹಾಜರಾಗಲು ಯಾವುದೇ ಸೌಲಭ್ಯ ಇಲ್ಲ ಎಂಬ ಕಾರಣಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೋಷಕರು ತಿಳಿಸಿದ್ದಾರೆ.
ಆಕೆ ಬುದ್ಧಿವಂತೆಯಾಗಿದ್ದು ಜಾಣ ವಿದ್ಯಾರ್ಥಿನಿಯಾಗಿದ್ದಳು. ನಾವು ಸ್ಮಾರ್ಟ್ ಫೋನ್ಗಳನ್ನು ಬಳಕೆ ಮಾಡುವುದಿಲ್ಲ. ನಮ್ಮ ಟಿವಿಯೂ ಹಾಳಾಗಿದ್ದು ಅದನ್ನು ಶೀಘ್ರ ರಿಪೇರಿ ಮಾಡುವುದಾಗಿ ಹೇಳಿದ್ದೆವು. ಶಾಲೆಯಲ್ಲೂ ನಿಮಗೆ ಟ್ಯಾಬೆಲ್, ಕಂಪ್ಯೂಟರ್ ಅನ್ನು ಒದಗಿಸಬಹುದು ಎಂದು ಹೇಳಿದ್ದರು. ಆದರೆ ಆಕೆ ಸೌಲಭ್ಯ ಸರಿಯಾಗಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ.
ಆದರೆ, ಸೋಮವಾರ ಸಂಜೆ 4 ಗಂಟೆಯ ಬಳಿಕ ದೇವಿಕಾ ನಾಪತ್ತೆಯಾಗಿದ್ದು ಮನೆಯಿಂದ 100 ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ. ವಿಚಾರಣೆ ನಡೆಸಿದ ಬಳಿಕವೇ ಸಾವಿನ ಬಗ್ಗೆ ಖಚಿತಪಡಿಸಬಹುದು ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.