ನವದೆಹಲಿ, ಜೂ. 03 (Daijiworld News/MB) : ಜೂನ್ ತಿಂಗಳಲ್ಲಿ ಕೊರೊನಾ ವೈರಸ್ನ ಸ್ಥಿತಿಗತಿಯಲ್ಲಿ ನೋಡಿಕೊಂಡು ಸಿನಿಮಾ ಹಾಲ್ ಪ್ರಾರಂಭ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವದೇಕರ್ ತಿಳಿಸಿದ್ದಾರೆ.
ಮಂಗಳವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಚಲನಚಿತ್ರ ನಿರ್ಮಾಪಕರ ಸಂಘ, ಸಿನೆಮಾ ಪ್ರದರ್ಶಕರು ಮತ್ತು ಚಿತ್ರೋದ್ಯಮದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅವರು, ಜೂನ್ ತಿಂಗಳಿನಲ್ಲಿ ಕೊರೊನಾಸ್ಥಿತಿಗತಿಯನ್ನು ಪರಾಮರ್ಶಿಸಿ ಸಿನಿಮಾ ಹಾಲ್ಗಳನ್ನು ತೆರೆಯುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.
ಈ ಮೊದಲೇ ಸಚಿವರಿಗೆ ಚಲನಚಿತ್ರ ರಂಗದ ಪ್ರತಿನಿಧಿಗಳು ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಚಿತ್ರರಂಗಕ್ಕೆ ಆದ ನಷ್ಟಗಳ ಬಗ್ಗೆ ತಿಳಿಸಿ ಸಿನಿಮಾಹಾಲ್ ತೆರೆಯುವಂತೆ ಮನವಿ ಸಲ್ಲಿಸಿದ್ದು ಅದರಲ್ಲಿ ಚಲನಚಿತ್ರೋದ್ಯಮದಲ್ಲಿ ತೊಡಗಿಕೊಂಡಿರುವ ಅನೇಕ ಕಾರ್ಮಿಕರಿಗೆ ಆರ್ಥಿಕ ಸಂಕಷ್ಟ ಉಂಟಾಗಿದ್ದು ವೇತನದಲ್ಲಿ ಸಬ್ಸಿಡಿ, 3 ವರ್ಷಗಳವರೆಗೆ ಬಡ್ಡಿರಹಿತ ಸಾಲ, ತೆರಿಗೆ ಮತ್ತು ಸುಂಕ ವಿನಾಯ್ತಿ, ವಿದ್ಯುತ್ ಬಿಲ್ ಕಡಿತ ಮೊದಲಾದ ಬೇಡಿಕೆಯನ್ನು ಮಾಡಿದ್ದರು.