ನವದೆಹಲಿ, ಜೂ. 03 (Daijiworld News/MB) : ಪೂರ್ವ ಲಡಾಕ್ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಚೀನಾದ ಸೇನಾಪಡೆ ಬೀಡುಬಿಟ್ಟಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಲಡಾಕ್ನ ಗಡಿ ವಾಸ್ತವ ರೇಖೆಯ ಪಂಗೊಂಗ್ ಟ್ಸೊ ಮತ್ತು ಗಲ್ವಾನ್ ಕಣಿವೆ ಪ್ರದೇಶಗಳಲ್ಲಿ ಚೀನಾದ ಸೇನಾಪಡೆ ನಿಯೋಜನೆಗೊಂಡಿದೆ. ಚೀನಾವು ತಮಗೆ ಸೇರಿದ ಪ್ರದೇಶ ಎಂದು ಹೇಳುವ ಪ್ರದೇಶವರೆಗೂ ಬಂದು ಬೀಡುಬಿಟ್ಟಿದ್ದು ಭಾರತ ಅದು ತಮಗೆ ಸೇರಿದ ಪ್ರದೇಶ ಎಂಬ ನಿರ್ಧಾರದಿಂದ ಹಿಂಜರಿಯುವುದಿಲ್ಲ. ಭಾರತವು ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.
ಜೂನ್ 6 ರಂದು ಭಾರತ ಮತ್ತು ಚೀನಾದ ಮಿಲಿಟರಿ ನಾಯಕರ ಉನ್ನತ ಮಟ್ಟದ ಸಭೆ ನಡೆಯಲಿದೆ. ಭಾರತ ತನ್ನ ನಿಲುವನ್ನು ಬದಲಾಯಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ.