ನವದೆಹಲಿ, ಜೂ 03 (Daijiworld News/MSP): ಕೊರೊನಾ ಸಾಂಕ್ರಮಿಕ ರೋಗಕ್ಕೆ ತುತ್ತಾಗಿ ಮ್ಟುತಪಟ್ಟ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ ಅವರ ತಾಯಿಯಲ್ಲೂ ಇದೀಗ ಸೋಂಕು ಇರುವುದು ಖಚಿತವಾಗಿದೆ.
ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ ವಾಜಿದ್ ಖಾನ್ ಅವರಿಗೆ ಕೊರೊನಾ ವೈರಸ್ ತಗುಲಿತ್ತು. ಕಿಡ್ನಿ ಸಂಬಂಧಿ ಖಾಯಿಲೆಯಿಂದಲೂ ಬಳಲುತ್ತಿದ್ದ ವಾಜಿದ್ ಖಾನ್, ಕೆಲವೇ ತಿಂಗಳುಗಳ ಹಿಂದೆಯಷ್ಟೇ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಗೆ ಒಳಗಾಗಿದ್ದರು. 42 ವರ್ಷದ ವಾಜಿದ್ ಖಾನ್ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಜೂ.೧ ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ವಾಜಿದ್ ಖಾನ್ ತಾಯಿ ರಜಿನಾ ಖಾನ್ ಹಾಗೂ ಅವರ ಮನೆಗೆಲಸದಾಕೆಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಇಬ್ಬರನ್ನು ಸುರನಾ ಆಸ್ಪತ್ರೆಗೆ ದಾಖಲಿಸಲಾಗಿದೆ ಅವರು ಮುಂಬೈನ ಸುರಾನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಆಸ್ಪತ್ರೆಯಲ್ಲಿದ್ದಾರೆ ಆರೋಗ್ಯ ಸುಧಾರಿಸಿದೆ ವರದಿ ನೆಗೆಟಿವ್ ಬಂದ ಬಳಿಕ ಮನೆಗೆ ಕರೆತರಲಾಗುತ್ತದೆ ಎಂದು ಕುಟುಂಬದವರು ತಿಳಿಸಿದ್ದಾರೆ. ತಮ್ಮ ಮಗ ವಾಜಿದ್ ಖಾನ್ ಗೆ ಆರೋಗ್ಯ ಸರಿಯಿಲ್ಲದಾಗ ಅವರನ್ನು ನೋಡಿಕೊಳ್ಳಲೆಂದು ತಾಯಿ ರಜಿನಾ ಖಾನ್ ಆಸ್ಪತ್ರೆಯಲ್ಲಿಯೇ ಉಳಿದಿದ್ದರು.
ಸಾಜಿದ್ ವಾಜಿದ್ 1998ರಲ್ಲಿ ಸಂಗೀತ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ಸಲ್ಮಾನ್ ಖಾನ್ ಅವರ ಪ್ಯಾರ್ ಕಿಯಾ ತೋ ಡರ್ನಾ ಕ್ಯಾದಲ್ಲಿ ಸಂಗೀತ ನಿರ್ದೇಶನ ಮಾಡಿದ್ದರು. ಬಳಿಕ ದಬಂಗ್,ಪಾರ್ಟ್ನರ್ ಇನ್ನೂ ಅನೇಕ ಚಿತ್ರಗಳಲ್ಲಿ ಹಾಡಿದ್ದರು. ಮೇರಾಹಿ ಜಲ್ವಾ, ಫೆವಿಕಾಲ್ ಸೆ, ಮಾಷಲ್ಲಾ ಇತರೆ ಗೀತೆಗಳನ್ನು ಹಾಡಿ ಜನರ ಮನಸ್ಸು ಗೆದ್ದಿದ್ದರು.