ನವದೆಹಲಿ, ಜೂ 03 (DaijiworldNews/PY) : ಕಳೆದ 24 ಗಂಟೆಗಳಲ್ಲಿ ದೇಶದಾತ್ಯಂತ 8,909 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, 217 ಮಂದಿ ಸಾವನ್ನಪ್ಪಿದ್ದಾರೆ, ಈ ಮೂಲಕ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 2 ಲಕ್ಷದ ಗಡಿ ದಾಟಿದೆ.
ಇಲ್ಲಿಯವರೆಗೆ ದೇಶದಲ್ಲಿ ಒಟ್ಟು ಸುಮಾರು 207,615 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, 5,815 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಸದ್ಯ 101,497 ಪ್ರಕರಣಗಳು ಸಕ್ರಿಯವಾಗಿದ್ದು, 100,303 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡಯಗಡೆಯಾಗಿದ್ದಾರೆ.
ದೆಹಲಿಯಲ್ಲಿ ಇದುವರೆಗೂ 556 ಮಂದಿ ಮೃತಪಟ್ಟಿದ್ದು, 9,243 ಮಂದಿ ಗುಣಮುಖರಾಗಿದ್ದಾರೆ. 2,333 ಸಕ್ರಿಯ ಪ್ರಕರಣಗಳಿದ್ದು, 22,132 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಮಹಾರಾಷ್ಟ್ರದಲ್ಲಿ ಇಲ್ಲಿಯವರೆಗೆ ಒಟ್ಟು 72,300 ಪ್ರಕರಣಗಳು ದಾಖಲಾಗಿದ್ದು, 2,465 ಮಂದಿ ಸಾವನ್ನಪ್ಪಿದ್ದಾರೆ
38,502 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದ್ದು, 31,333 ಮಂದಿ ಗುಣಮುಖರಾಗಿದ್ದಾರೆ.
ಗುಜರಾತ್ನಲ್ಲಿ 17,200 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸದ್ಯ 5,357 ಸಕ್ರಿಯ ಪ್ರಕರಣಗಳಿದ್ದು, 10,780 ಗುಣಮುಖರಾಗಿದ್ದಾರೆ. 1,063 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ ಈವರೆಗೆ 24,586 ಮಂದಿಗೆ ಸೋಂಕು ತಗುಲಿದ್ದು, 10,683 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 197 ಮಂದಿ ಮೃತಪಟ್ಟಿದ್ದು, 13,706 ಗುಣಮುಖರಾಗಿದ್ದಾರೆ.
ಮಧ್ಯಪ್ರದೇಶದಲ್ಲಿ 364, ಪಶ್ಚಿಮ ಬಂಗಾಳದಲ್ಲಿ 335, ಉತ್ತರ ಪ್ರದೇಶದಲ್ಲಿ 222 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.