ಪಶ್ಚಿಮ ಬಂಗಾಳ, ಜೂ 03 (DaijiworldNews/PY) : ಕೊರೊನಾದಿಂದಾಗಿ ಸಂಕಷ್ಟಕ್ಕೊಳಗಾಗಿರುವ ಅಸಂಘಟಿತ ಹಾಗೂ ವಲಸೆ ಕಾರ್ಮಿಕರ ಖಾತೆಗಳಿಗೆ 10ಸಾವಿರ ಹಣ ಹಾಕುವಂತೆ ಕೇಂದ್ರ ಸರ್ಕಾರವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒತ್ತಾಯಸಿದ್ದಾರೆ.
ಕೊರೊನಾ ಸಂಕಷ್ಟದಿಂದ ಸದ್ಯ ಜನರನ್ನು ಪಾರು ಮಾಡುವ ಸಲುವಾಗಿ ಪ್ರಧಾನಿ ಅವರ ಬಳಿ ಇರುವ ಪಿಎಂ ಕೇರ್ಸ್ನಿಂದ ಹಣ ಹಾಕುವಂತೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೊರೊನಾವೂ ನಮ್ಮ ಊಹೆಗೂ ನಿಲುಕದಂತಹ ಸಂಕಷ್ಟವನ್ನು ಉಂಟುಮಾಡಿದ್ದು, ಇದರಿಂದಾಗಿ ಹಿಂದೆಂದೂ ಕಂಡಿರದ ಆರ್ಥಿಕ ಸಂಕಷ್ಟವನ್ನು ಅಸಂಘಟಿತ ವಲಯ ಹಾಗೂ ವಲಸೆ ಕಾರ್ಮಿಕರು ಎದುರಿಸುತ್ತಿದ್ದಾರೆ.