ನವದೆಹಲಿ, ಜೂ. 04 (Daijiworld News/MB) : ಲಡಾಖ್ ಗಡಿಯಲ್ಲಿ ಚೀನಾ ಭಾರತ ಯೋಧರ ನಡುವೆ ಸಂಘರ್ಷ, ಉದ್ವಿಗ್ನ ಸ್ಥಿತಿ ಉಂಟಾಗಿದೆ. ಏತನ್ಮಧ್ಯೆ ಚೀನಾದ ಯಾವುದೇ ಸೈನಿಕರು ಭಾರತವನ್ನು ಪ್ರವೇಶಿಸಿಲ್ಲವೇ ಎಂದು ಸ್ಪಷ್ಟಪಡಿಸಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಚೀನಾದ ಯಾವುದೇ ಸೈನಿಕರು ಭಾರತವನ್ನು ಪ್ರವೇಶಿಸಿಲ್ಲ ಎಂದು ಭಾರತ ಸರ್ಕಾರ ದಯವಿಟ್ಟು ಖಚಿತಪಡಿಸಬಹುದೇ? ಎಂದು ಪ್ರಶ್ನಿಸಿದ್ದು ಇದರೊಂದಿಗೆ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆಗೆ ಸಂಬಂಧಿಸಿದಂತೆ ಉಭಯ ದೇಶಗಳ ಸೇನೆಯ ಉನ್ನತ ಅಧಿಕಾರಿಗಳು ಜೂನ್ 6ರಂದು ಸಭೆ ನಡೆಸಲಿದ್ದಾರೆ ಎಂಬ ವರದಿಯನ್ನು ಕೂಡಾ ಹಂಚಿಕೊಂಡಿದ್ದಾರೆ.
ಮಂಗಳವಾರವಷ್ಟೇ ಚೀನಾದ ಕೆಲವು ಯೋಧರು ಲಡಾಖ್ನ ಪೂರ್ವ ಭಾಗದ ಗಡಿಯೊಳಗೆ ನುಗ್ಗಿದ್ದಾರೆ. ಚೀನಾ ಅವರ ಪ್ರದೇಶ ಎಂದು ಹೇಳುತ್ತಿರುವ ಸ್ಥಳದಲ್ಲಿ ಬಂದು ಬೀಡು ಬಿಟ್ಟಿದ್ದಾರೆ. ನಮ್ಮ ಸೈನ್ಯ ಅಗತ್ಯವಿದ್ದ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದರು.