ಬೆಂಗಳೂರು, ಜೂ. 04 (Daijiworld News/MB) : ಸುಮಾರು ಒಂದು ವರ್ಷಗಳಿಂದ ಸಾಮಾಜಿಕ ಜಾಲತಾಣವನ್ನು ಬಳಸದೆ ಇದ್ದ ನಟಿ ರಮ್ಯಾ ಈಗ ಫೇಸ್ಬುಕ್ನಲ್ಲಿ ಸಕ್ರಿಯರಾಗಿದ್ದು ಕೇರಳದಲ್ಲಿ ಗರ್ಭಿಣಿ ಕಾಡನೆ ಮೃತಪಟ್ಟ ಘಟನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಕೇರಳದ ಪಾಲಕ್ಕಾಡ್ನಲ್ಲಿ ಆಹಾರ ಅರಸಿ ಬಂದ ಗರ್ಭಿಣಿ ಕಾಡಾನೆಯೊಂದಕ್ಕೆ ದುಷ್ಕರ್ಮಿಗಳು ಪಟಾಕಿ ತುಂಬಿದ ಅನಾನಸ್ ನೀಡಿ ಹತ್ಯೆಗೈದಿದ್ದು ಈ ಘಟನೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಖಂಡನೆ ವ್ಯಕ್ತವಾಗಿದೆ. ಇದೀಗ ಈ ಘಟನೆಗೆ ಮರುಕಪಟ್ಟಿರುವ ನಟಿ ರಮ್ಯಾ ತನ್ನ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
"ನೀವೆಲ್ಲರೂ ಚೆನ್ನಾಗಿದ್ದೀರಿ ಮತ್ತು ಸುರಕ್ಷಿತವಾಗಿದ್ದೀರಿ ಎಂದು ಭಾವಿಸುತ್ತೇವೆ! ಈ ಅರ್ಜಿಗೆ ಸಹಿ ಹಾಕಲು ಒಂದು ನಿಮಿಷ ಸಮಯ ತೆಗೆದುಕೊಳ್ಳಿ!" ಎಂದು ಆನೆಯ ಸಾವಿಗೆ ಕಾರಣವಾದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಒತ್ತಾಯಿಸಿ ಪೆಟಿಶನ್ ಮನವಿಗೆ ಎಲ್ಲರೂ ಸಹಿ ಹಾಕುವಂತೆ ಲಿಂಕ್ ಒಂದನ್ನು ಶೇರ್ ಮಾಡಿದ್ದಾರೆ.
ಈ ಪೋಸ್ಟ್ ನೋಡಿದ ನಟಿ ರಮ್ಯಾ ಅವರ ಹಲವು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು ಕೆಲವರು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗುವಂತೆ ಒತ್ತಾಯಿಸಿದ್ದಾರೆ.