ನವದೆಹಲಿ, ಜೂ. 04 (Daijiworld News/MB) : ದೇಶದ ರಕ್ಷಣಾ ಇಲಾಖೆ ಕಾರ್ಯದರ್ಶಿಗೆ ಕೊರೊನಾ ಸೋಂಕು ಪಾಸಿಟಿವ್ ಆಗಿದೆ.
ಕಾರ್ಯದರ್ಶಿ ಅವರ ಆರೋಗ್ಯ ಸ್ಥಿರವಾಗಿದ್ದು, ಈಗ ಅವರು ಹೋಮ್ ಕ್ವಾರಂಟೈನ್ನಲ್ಲಿದ್ದಾರೆ.
ರೈಸಿನಾ ಹಿಲ್ಸ್ನ ದಕ್ಷಿಣ ಬ್ಲಾಕ್ನಲ್ಲಿರುವ ಸಚಿವಾಲಯದ ಪ್ರಧಾನ ಕಚೇರಿಯಲ್ಲಿ 35 ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು ಅವರಿಗೆ ಹೋಂ ಕ್ವಾರಂಟೈನ್ಗೆ ಒಳಪಡುವಂತೆ ಸೂಚಿಸಲಾಗಿದೆ. ಹಾಗೆಯೇ ಇವರ ಸಂಪರ್ಕಕ್ಕೆ ಬಂದ ಇತರರನ್ನು ಪತ್ತೆ ಹಚ್ಚಲಾಗುತ್ತಿದೆ.
ರೈಸಿನಾ ಹಿಲ್ಸ್ನ ದಕ್ಷಿಣ ಬ್ಲಾಕ್ ಸೀಲ್ಡೌನ್ ಮಾಡಿ ಸ್ಯಾನಿಟೈಝೇಷನ್ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ. ಇನ್ನು ಮುಂಜಾಗ್ರತಾ ದೃಷ್ಟಿಯಿಂದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಬುಧವಾರ ಕಚೇರಿಗೆ ಬಂದಿಲ್ಲ ಎನ್ನಲಾಗಿದೆ.