ನವದೆಹಲಿ, ಜೂ. 04 (Daijiworld News/MB) : ದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ಉದ್ದೇಶದಿಂದ ವಿದೇಶಿ ಉದ್ಯಮಿಗಳು, ಎಂಜಿನಿಯರ್ಗಳು, ಆರೋಗ್ಯ ಕ್ಷೇತ್ರದ ವೃತ್ತಿಪರರು ಬ್ಯುಸಿನೆಸ್ ವೀಸಾ, ತಾತ್ಕಾಲಿಕ ವೀಸಾಗಳನ್ನು ಪಡೆದು ಭಾರತಕ್ಕೆ ಆಗಮಿಸಬಹುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಹಲವು ಯಂತ್ರಗಳು ವಿದೇಶಿ ನಿರ್ಮಿತವಾಗಿದ್ದು ಲಾಕ್ಡೌನ್ ಬಳಿಕ ಉಂಟಾದ ಆರ್ಥಿಕ ಸಂಕಷ್ಟದಿಂದ ಚೇತರಿಸಿಕೊಳ್ಳುವ ನಿಟ್ಟಿನಲ್ಲಿ ವಿದೇಶಿಗರಿಗೆ ಮುಕ್ತ ಆಹ್ವಾನ ನೀಡಲಾಗಿದೆ ಎಂದು ವರದಿ ತಿಳಿಸಿದೆ.
ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಮಾರ್ಚ್ನಲ್ಲಿ ವಿದೇಶಿಗರ ಆಗಮನಕ್ಕೆ ನಿರ್ಬಂಧ ಹೇರಲಾಗಿತ್ತು. ಇದೀಗ ಬಾರಿಗೆ ಕೇಂದ್ರ ಹೊರದೇಶಿಗರಿಗೆ ಮುಕ್ತ ಆಹ್ವಾನ ನೀಡಿದೆ.