ಮೈಸೂರು, ಜೂ 04 (DaijiworldNews/PY) : ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಅವರ ಪುತ್ರ ಏನು ಕಡಲೇಪುರಿ ತಿನ್ನುತ್ತಿದ್ದರಾ. ಮುಖ್ಯಮಂತ್ರಿ ಹುದ್ದೆ ಈಗಂತೂ ಖಾಲಿ ಇಲ್ಲ. ಈಗ ಇರುವ ಮುಖ್ಯಮಂತ್ರಿ ಪಾದರಸದಂತೆ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಸಿದ್ದರಾಮಯ್ಯ ಮರೆಯಬಾರದು ಎಂದು ಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಶಿವಮೊಗ್ಗ ಡಿಸಿಸಿ ಬ್ಯಾಂಕ್ ವಿಚಾರಣೆಯಲ್ಲೂ ಮಧ್ಯ ಪ್ರವೇಶ ಮಾಡಿಲ್ಲ. ಅವರಿಗೂ ವರ್ಗಾವಣೆಗೂ ಯಾವುದೇ ಸಂಬಂಧವಿಲ್ಲ. ಮುಖ್ಯಮಂತ್ರಿಯನ್ನು 2 ದಿನಗಳಿಗೊಮ್ಮೆ ಭೇಟಿ ಮಾಡುತ್ತಿದ್ದೇನೆ. ತಮ್ಮ ಪುತ್ರನನ್ನು ಅವರು ಒಮ್ಮೆಯೂ ಭೇಟಿ ಆಗಿಲ್ಲ ಎಂದು ಹೇಳಿಲ್ಲ. ಸೂಪರ್ ಸಿಎಂ ರೀತಿ ವಿಜಯೇಂದ್ರ ವರ್ತಿಸಿಲ್ಲ. ಯಾವ ವಿಚಾರದಲ್ಲಿಯೂ ಹಸ್ತಕ್ಷೇಪ ಮಾಡದೇ ಇರುವ ಎಂದರು. ಬಿ.ವೈ.ವಿಜಯೇಂದ್ರ ವಿರುದ್ಧ ಸಿದ್ದರಾಮಯ್ಯ ಈಗ ರಾಜಕೀಯ ಕಾರಣಕ್ಕೆ ಹೇಳಿಕೆ ನೀಡುತ್ತಿದ್ದಾರೆ. ಅವರು ಹೇಳಿರುವ ಮಾತು ಸತ್ಯಕ್ಕೆ ದೂರವಾದ ವಿಚಾರ ಎಂದು ತಿಳಿಸಿದರು.
ಅಡಗೂರು ಎಚ್.ವಿಶ್ವನಾಥ್ ಒಬ್ಬರೇ ಅಲ್ಲ. ಎಂ.ಟಿ.ಬಿ ನಾಗರಾಜ್, ಶಂಕರ್, ರೋಷನ್ಬೇಗ್ ಸೇರಿದಂತೆ ಹಲವರು ವಿಧಾನಪರಿಷತ್ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದು, ಇವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎನ್ನುವುದು ನಮ್ಮ ಒತ್ತಾಯವೂ ಆಗಿದೆ. ಸಿಎಂ ಬಿಎಸ್ವೈ ಅವರು ಮಾತಿಗೆ ತಪ್ಪುವುದಿಲ್ಲ. ಆದರೆ, ಹೈಕಮಾಂಡ್ ಅವರಿಗೂ ಇದೆ ಎನ್ನುವುದನ್ನು ಮರೆಯುವಂತಿಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಅವಕಾಶ ಮಾಡಿಕೊಡಿ ಎಂದು ಮೈಸೂರು ಜಿಲ್ಲೆಯಲ್ಲಿ ಹಲವು ಮಂದಿ ಮನವಿ ಮಾಡುತ್ತಿದ್ದಾರೆ. ಈ ವಿಚಾರ ಲಾಭಿ ಎಂದು ಅನಿಸುವುದಿಲ್ಲ. ರಾಮದಾಸ್ ಅವರು ನಿರಾಣಿ ಅವರನ್ನು ಭೇಟಿ ಮಾಡಿರುವ ಹಳೆ ವಿಡಿಯೋವನ್ನು ಹಾಕಿ ತೋರಿಸುವುದರ ಹಿಂದೆ ಮಾಧ್ಯಮದವರ ಉದ್ದೇಶ ಏನು ಎಂದು ಸುದ್ದಿಗಾರರನ್ನು ಕೇಳಿದರು.
ಈಗಂತೂ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಈಗ ಇರುವ ಮುಖ್ಯಮಂತ್ರಿ ಪಾದರಸದಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ಸಿದ್ದರಾಮಯ್ಯ ಅವರು ಮರೆಯಬಾರದು. ಬಿಜೆಪಿಯಲ್ಲಿ ಯಾರೂ ಎಂ.ಟಿ.ನಾಗರಾಜ್ ಅವರಿಗೆ ಅಡ್ಡಗಾಲು ಹಾಕಿಲ್ಲ. ಈ ರೀತಿಯಾದ ಹೇಳಿಕೆಯೇ ಅವರ ಸೋಲಿಗೆ ಕಾರಣ ಎಂದರು.
ಜೂನ್ 8ರಿಂದ ಮೈಸೂರು ಮೃಗಾಲಯವನ್ನು ತೆರೆಯಲು ಅನುಮತಿ ನೀಡುವಂತೆ ಸಿಎಂ ಅವರನ್ನು ಕೇಳಲಾಗಿದೆ. ಒಂದೆರಡು ದಿನಗಳಲ್ಲಿ ಈ ಕುರಿತ ಒಪ್ಪಿಗೆಯು ಅಧಿಕೃತವಾಗಿ ಬರಲಿದೆ. ಈ ವರ್ಷದಿಂದ 10 ಮಂದಿ ಹಿರಿಯ ಸಾಧಕರನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿ ಗುರುತಿಸಿ ಗೌರವಿಸುವ ಕಾರ್ಯ ಪ್ರಾರಂಭವಾಗಲಿದೆ. ಕಾರ್ಯಕ್ರಮವು ಒಂದೆರಡು ವಾರದಲ್ಲಿ ನಡೆಯಲಿದೆ. ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಲ್ಲಿ ಯಾವುದೇ ಅಸಮಾಧಾನವಾಗಲಿ, ಭಿನ್ನಮತವಾಗಲಿ ಇಲ್ಲ ಎಂದು ತಿಳಿಸಿದ