ಮಡಿಕೇರಿ, ಜೂ 04 (DaijiworldNews/PY) : ಜುಲೈನಿಂದಾದರೂ ಶಾಲೆ ಆರಂಭವಾಗುವುದು ಒಳ್ಳೆಯದು ಎಂದು ಮೈಸೂರು ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಹೇಳಿದರು.
ಕೊಡಗಿನ ಜಂಬೂರಿನಲ್ಲಿ 2018ರ ಪ್ರವಾಹ ಸಂತ್ರಸ್ತರಿಗೆ ನಿರ್ಮಾಣವಾಗಿರುವ ಮನೆಗಳ ಹಸ್ತಾಂತರ ಮಾಡುವ ಕಾರ್ಯಕ್ರಮದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆನ್ಲೈನ್ನಲ್ಲಿ ಕಲಿಯುವುದಕ್ಕೆ ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ಟಾಪ್ಗಳು ಇರುವುದಿಲ್ಲ. ಇದರಿಂದಾಗಿ ಆ ಮಕ್ಕಳ ಕಲಿಕೆಗೆ ಸಮಸ್ಯೆ ಎದುರಾಗುತ್ತದೆ. ಈಗಾ ಎಲ್ಲಾ ಜಿಲ್ಲೆಗಳಲ್ಲಿಯೂ ಕೊರೊನಾ ಟೆಸ್ಟ್ ಕೇಂದ್ರಗಳಿರುವ ಕಾರಣ ಅಲ್ಲಿಯೇ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಪೋಷಕರು ಕರೊನಾ ಟೆಸ್ಟ್ ಮಾಡಿ ಜುಲೈನಲ್ಲಿ ಶಾಲೆ ಪ್ರಾರಂಭ ಮಾಡುವಂತೆ ಆಗಬೇಕು ಎಂದು ತಿಳಿಸಿದರು.
ಎಲ್ಲವನ್ನೂ ಆನ್ಲೈನ್ ಮೂಲಕ ಕಲಿಸಲು ಸಾಧ್ಯವಿಲ್ಲ. ಶಾಲೆಯಲ್ಲಿ ಕಲಿಯುವ ರೀತಿಯೇ ಬೇರೆ. ಶಾಲೆಯಲ್ಲಿ ಕಲಿಯುವ ಶಿಸ್ತು ಎಲ್ಲವನ್ನೂ ಆನ್ಲೈನ್ನಲ್ಲಿ ಕಲಿಯಲು ಸಾಧ್ಯವಿಲ್ಲ ಎಂದರು.