ನವದೆಹಲಿ, ಜೂ 05 (DaijiworldNews/PY) : ಆತ್ಮನಿರ್ಭರ ಭಾರತ ಕಲ್ಪನೆಯಡಿ ತೇಜಸ್-ಎನ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಈಡಿದ್ದು, ಇದು 6 ವರ್ಷ್ಗಳ ಒಳಗಾಗಿ ನೌಕಪಡೆಗೆ ಸಮರ್ಪಣೆಯಾಗಲಿದೆ.
ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ ತೇಜಸ್ನ ತೇಜಸ್-ಎನ್ ಸುಧಾರಿತ ಆವೃತ್ತಿಯನ್ನು ನಿರ್ಮಿಸಲು ಮುಂದಾಗಿದೆ. ಇದು ಡಬಲ್ ಎಂಜಿನ್ ಹೊಂದಿದ್ದು, ಮೇ 22ರಂದು ನಡೆದ ವಾಯು ಹಾಗೂ ನೌಕಾದಳ ಮುಖ್ಯಸ್ಥರ ಸಭೆಯಲ್ಲಿ ರಕ್ಷಣ ಸಚಿವ ರಾಜನಾಥ್ ಸಿಂಗ್ ನಿರ್ಧಾರ ತೆಗೆದುಕೊಂಡಿದ್ದರು.
ಆತ್ಮನಿರ್ಭರ ಭಾರತ ಯೋಜನೆಯಡಿಲ್ಲಿ ಮೊದಲ ಯುದ್ದ ವಿಮಾನವಾದ ತೇಜಸ್ ಸಂಪೂರ್ಣ ಸ್ವದೇಶೀ ತಾಂತ್ರಿಕ ಉಪಕರಣ ಹೊಂದಿರಲಿದೆ ಎಂದು ಎಡಿಎ ತಿಳಿಸಿದೆ.
ತೇಜಸ್-ಎನ್ ಯುದ್ದ ವಿಮಾನವು ಅವಳಿ ಎಂಜಿನ್ಗಳನ್ನು ಹೊಂದಿದ್ದು, ಆರು ಏರ್ ಟು ಕ್ಷಿಪಣಿಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವಿದೆ. ಈಗಾಗಲೇ ವಾಯು ಸೇನೆಯ ಭಾಗವಾಗಿರುವ ಸುಧಾರಿತ ಹಗುರ ಯುದ್ದ ವಿಮಾನಕ್ಕಿಂತ ಸುಧಾರಿತ ತಂತ್ರಜ್ಞಾನದೊಂದಿಗೆ ತೇಜಸ್ಇ-ಎನ್ ರೂಪು ತಾಳಲಿದೆ. ಇದು ಸಾಗರದಲ್ಲಿ ಸಮರ ಕಾರ್ಯಾಚರಣೆಗೆ ತಕ್ಕಂತೆ ಮಾರ್ಪಾಡಾಗಲಿದ್ದು, ಐಎನ್ಎಸ್ ವಿಕ್ರಮಾದಿತ್ಯದೊಂದಿಗೆ ವಿಕ್ರಾಂತ್ ಮೇಳಲಿಂದಲೂ ಹಾರಾಟ ನಡೆಸಲಿದೆ.
ಐಎನ್ಎಸ್ ವಿಕ್ರಮಾದಿತ್ಯ ಮೇಲೆ ಕಳೆದ ಜನವರಿಯಲ್ಲಿ ತೇಜಸ್-ಎನ್ ಪ್ರಯೋಗ ಮಾದರಿಯನ್ನು ಯಶಸ್ವಿ ಲ್ಯಾಂಡಿಂಗ್ ಮಾಡಿತ್ತು. ಇದು 244 ಕಿ.ಮೀ. ವೇಗದಲ್ಲಿ ಹಾರಿ ಬಂದು ಕಿರು ರನ್ವೇಯಲ್ಲಿ ಸುರಕ್ಷಿತವಾಗಿ ನಿಲುಗಡೆಗೊಂಡಿತ್ತು.