ನವದೆಹಲಿ, ಜೂ 05 (DaijiworldNews/PY) : ವಿಶ್ವ ಪರಿಸರ ದಿನದಂದು, ನಮ್ಮ ಗ್ರಹದ ಸಮೃದ್ದ ಜೀವವೈವಿಧ್ಯತೆಯನ್ನು ಕಾಪಾಡುವಂತ ಪ್ರತಿಜ್ಞೆಯನ್ನು ನಾವು ಪುನರುಚ್ಚರಿಸಬೇಕಿದೆ. ಮುಂಬರುವ ಪೀಳಿಗೆಗಾಗಿ ಇನ್ನೂ ಉತ್ತಮವಾದ ಭೂಮಿಯನ್ನು ಬಿಟ್ಟು ಕೊಡೋಣ ಎಂದು ವಿಶ್ವ ಪರಿಸರ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ವಿಶ್ವ ಪರಿಸರ ದಿನದಂದು, ನಮ್ಮ ಹ್ರಹದ ಸಮೃದ್ದ ಜೀವವೈವಿಧ್ಯತೆಯನ್ನು ಕಾಪಾಡುವಂತ ಪ್ರತಿಜ್ಞೆಯನ್ನು ನಾವು ಪುನರುಚ್ಚರಿಸಬೇಕಿದೆ. ಭೂಮಿಯನ್ನು ಹಂಚಿಕೊಳ್ಳುವ ಸಸ್ಯ ಸಂಪತ್ತುಗಳನ್ನು ಹಾಗೂ ಪ್ರಾಣಿಗಳು ಸಮೃದ್ದವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾದಷ್ಟು ಒಟ್ಟಾಗಿ ಕೆಲಸ ಮಾಡಬೇಕು. ಮುಂಬರುವ ಪೀಳಿಗೆಗಾಗಿ ಇನ್ನೂ ಉತ್ತಮವಾದ ಭೂಮಿಯನ್ನು ಬಿಟ್ಟು ಕೊಡೋಣ ಎಂದು ತಿಳಿಸಿದ್ದಾರೆ.
ಇದರೊಂದಿಗೆ ತಮ್ಮ ಕೊನೆಯ ಮನದ ಮಾತು ಸಂಚಿಕೆಯ ಭಾಗವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಮಳೆನೀರಿನ ಸಂರಕ್ಷಣೆ ಹಾಗೂ ಪ್ರಕೃತಿಯ ಸಮೃದ್ದ ವೈವಿಧ್ಯತೆಯನ್ನು ರಕ್ಷಿಸುಚ ವಿಚಾರವಾಗಿ ಅವರು ಪ್ರಸ್ತಾಪಿಸಿದ್ದಾರೆ.
ಶಬ್ದ ಹಾಗೂ ವಾಯುಮಾಲಿನ್ಯದಿಂದಾಗಿ ಹೆಚ್ಚಿನ ಪಕ್ಷಿ ಸಂಕುಲಗಳು ಕಣ್ಮರೆಯಾಗಿವೆ. ಆದರೆ, ಈಗ ಅನೇಕ ವರ್ಷಗಳ ನಂತರ ತಮ್ಮ ಮನೆಗಳಲ್ಲಿಯೇ ಜನರು ಜನರು ಅವುಗಳ ಚಿಲಿಪಿಲಿಯನ್ನು ಮತ್ತೊಮ್ಮೆ ಆಲಿಸಬಹುದಾಗಿದೆ. ಮಳೆ ನೀರಿನ ಸಂರಕ್ಷಣೆ ಅಗತ್ಯ ಹಾಗೂ ಮುಂಬರುವ ಮಳೆಗಾಲದ ಸಂದರ್ಭ ಮಳೆನೀರನ್ನು ಉಳಿಸಲು ಶ್ರಮಿಸಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಪ್ರಧಾನಿ ಮೋದಿ ಅವರು ಮನವಿ ಮಾಡಿದ್ದರು.
ಜೂನ್ 5ರಂದು ಇಡೀ ಜಗತ್ತೇ ವಿಶ್ವ ಪರಿಸರ ದಿನವನ್ನು ಆಚರಣೆ ಮಾಡಲಿದೆ. ಈ ವರ್ಷದ ವಿಶ್ವ ಪರಿಸರ ದಿನದ ವಿಶೇಷ ಎಂದರೆ ಅದು ಜೈವಿಕ ವೈವಿಧ್ಯತೆ. ಪ್ರಸ್ತುತ ಪರಿಸ್ಥಿತಿಯಲ್ಲಿನ ವಿಚಾರಗಳನ್ನು ನೋಡುವುದಾದರೆ ಈ ಥೀಮ್ ವಿಶೇಷವಾಗಿದೆ. ಕಳೆದ ವಾರದ ಲಾಕ್ಡೌನ್ ಸಂದರ್ಭ ಜೀವನದ ವೇಗವು ಸ್ವಲ್ಪ ನಿಧಾನವಾಗಬಹುದು. ಆದರೆ, ಪ್ರಕೃತಿಯ ಸಮೃದ್ದ ವೈವಿಧ್ಯತೆಯು ಅಥವಾ ನಮ್ಮ ಸುತ್ತಮುತ್ತಲಿರುವ ವೈವಿಧ್ಯತೆಯ ವಿಚಾರದ ಬಗ್ಗೆ ಆತ್ಮಾವಲೋಕನ ಮಾಡುವ ನಿಟ್ಟಿನಲ್ಲಿ ನಮಗೆ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದ್ದರು.