ತಿರುವನಂತಪುರ, ಜೂ 05 (Daijiworld News/MSP): ಕೇರಳದಲ್ಲಿ ಸ್ಪೋಟಕ ತುಂಬಿದ ಅನಾನಸು ಹಣ್ಣನ್ನು ತಿನ್ನಲು ಕೊಟ್ಟು ಗರ್ಭಿಣಿ ಆನೆಯನ್ನು ಕೊಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಬಂಧಿಸಲಾಗಿದ್ದು, ಮತ್ತೋರ್ವನನ್ನು ವಶಕ್ಕೆ ಪಡೆಯಲಾಗಿದೆ ಎಂದು ಕೇರಳದ ಅರಣ್ಯ ಸಚಿವ ಕೆ. ರಾಜು ಹೇಳಿದ್ದಾರೆ.
ವಿಶೇಷ ತನಿಖಾ ದಳವೂ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಪಿ. ವಿಲ್ಸನ್ ಎಂಬಾತನನ್ನು ಬಂಧಿಸಿದ್ದು ಹೆಚ್ಚಿನ ಮಾಹಿತಿಯನ್ನು ಸಂಜೆಯ ವೇಳೆಗೆ ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ.
ವೆಲ್ಲಿಯಾರ್ ನದಿಯ ತಟದಲ್ಲಿದ್ದ ಅನನಾಸು ಹಣ್ಣನ್ನು ತಿನ್ನಲು ಹೋಗಿದ್ದ ಗರ್ಭಿಣಿ ಆನೆಯು ಸಾವನ್ನಪ್ಪಿತ್ತು. ಆನೆಯ ಗಂಭೀರ ಗಾಯಗದ ನೋವು ಸಹಿಸಲಾಗದೆ ನೀರಿನಲ್ಲಿ ನಿಂತು ಸಾವನ್ನಪ್ಪಿತ್ತುಅರಣ್ಯಾಧಿಕಾರಿ ಮೋಹನ್ ಕೃಷ್ಣನ್ ಎಂಬವರು ಈ ಬಗ್ಗೆ ಮೇ 27ರಂದು ತನ್ನ ಫೇಸ್ ಬುಕ್ ಖಾತೆಯಲ್ಲಿ ಘಟನೆಯ ಬಗ್ಗೆ ಮಾಹಿತಿ ನೀಡಿದ ಬಳಿಕ ವೈರಲ್ ಆಗಿತ್ತು. ಈ ಬಗ್ಗೆ ಬಾಲಿವುಡ್ ತಾರೆಯರಿಂದ ಹಿಡಿದು ಹಲವಾರು ಗಣ್ಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಆನೆಯ ಹತ್ಯೆ ವಿವಾದಕ್ಕೆ ಕಾರಣವಾಗಿದ್ದರಿಂದ ಮುಜುಗರಕ್ಕೊಳಗಾದ ಕೇರಳ ಸರ್ಕಾರ ಗುರುವಾರ ವಿಶೇಷ ತನಿಖಾ ತಂಡವನ್ನು ರಚಿಸಿತ್ತು.