ನವದೆಹಲಿ, ಜೂ 06 (Daijiworld News/MSP): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೊರೊನಾ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾರತದಲ್ಲಿ ಕೊರೊನಾ ವೈರಸ್ ಬಿಕ್ಕಟ್ಟನ್ನು ನಿಭಾಯಿಸಿದ ರೀತಿಯನ್ನು ರಾಹುಲ್ ಪ್ರಶ್ನಿಸಿದ್ದು, ಕೋವಿಡ್ -19 ಸೋಂಕುಗಳ ನಿಯಂತ್ರಿಸಲು ಲಾಕ್ಡೌನ್ ಹೇರಿದ ಸಮಯ ಮತ್ತು ನಂತರದ ದಿನಗಳಲ್ಲಿ ಆರ್ಥಿಕ ಚಟುವಟಿಕೆಯನ್ನು ಪುನರುಜ್ಜೀವನಗೊಳಿಸಲು ಅನ್ಲಾಕ್ ಮಾಡಿರುವುದು ಸರಿಯಾದ ಸಮಯಕ್ಕಲ್ಲ ಎಂದು ಆರೋಪಿಸಿದರು.
"ನಾಲ್ಕು ದೇಶಗಳ ಲಾಕ್ ಡೌನ್ ಜೊತೆ ಭಾರತದ ಲಾಕ್ ಡೌನ್ ಅನ್ನು ಹೋಲಿಕೆ ಮಾಡಿರುವ ಗ್ರಾಫ್ ಹಾಗೂ ಒಂದೇ ಸಾಲಿನ ಕಾಮೆಂಟ್ ಬರೆದು ಇದೊಂದು ವಿಫಲವಾದ ಲಾಕ್ಡೌನ್ನಂತೆ ಕಾಣಿಸುತ್ತಿದೆ ಎಂದು ಟ್ವೀಟ್ ಮಾಡಿ ರಾಹುಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ,
ಅತೀ ಹೆಚ್ಚು ಕೊರೋನಾಘಾತಕ್ಕೆ ಗುರಿಯಾಗಿರುವ ಸ್ಪೇನ್, ಜರ್ಮನಿ, ಇಟಲಿ ಹಾಗೂ ಬ್ರಿಟನ್ ನಲ್ಲಿ ಲಾಕ್ ಡೌನ್ ನಂತರ ಪ್ರಕರಣಗಳು ಇಳಿದಿವೆ. ಆದರೆ ಭಾರತದಲ್ಲಿ ಲಾಕ್ ಡೌನ್ ಸಮಯದಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ ಎಂದು ತಿಳಿಸಿದ್ದಾರೆ.