ನವದೆಹಲಿ, ಜೂ. 06 (Daijiworld News/MB) : ಕೇಂದ್ರ ಗೃಹ ಸಚಿವಾಲಯದ ಅಧಿಕೃತ ಫೇಸ್ಬುಕ್ ಪೇಜ್ನಲ್ಲಿ ಮದ್ಯದ ಬಾಟಲ್ಗಳ ಫೋಟೋವನ್ನು ಶೇರ್ ಮಾಡಿದ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಗೃಹ ಸಚಿವಾಲಯದ ಎಲ್ಲಾ ಮಾಧ್ಯಮ ತಂಡವನ್ನು ಸರ್ಕಾರದ ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಆಂಫಾನ್ ಚಂಡಮಾರುತದ ಬಳಿಕ ಕೇಂದ್ರ ರಕ್ಷಣಾ ಮೀಸಲು ಪಡೆ ಕೈಗೊಂಡಿದ್ದ ಕೆಲಸಗಳ ಬಗ್ಗೆ ಫೋಟೋ ಹಾಕುವಾಗ ತಪ್ಪಿ ಮದ್ಯದ ಬಾಟಲ್ ಹಾಗೂ ಗ್ಲಾಸ್ಗಳ ಫೋಟೋವನ್ನು ಕೂಡಾ ಹಾಕಲಾಗಿತ್ತು. ಇದನ್ನು ಬಳಿಕ ತೆಗೆದುಹಾಕಲಾಗಿದ್ದು ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು.
ಇದೀಗ ಕೇಂದ್ರ ಗೃಹ ಸಚಿವಾಲಯದ ಎಲ್ಲಾ ಮಾಧ್ಯಮ ತಂಡವನ್ನು ಸರ್ಕಾರದ ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡಲಾಗಿದ್ದು ಗೃಹ ಸಚಿವಾಲಯದ ವಕ್ತಾರರ ಹೊಸ ತಂಡದ ಉಸ್ತುವಾರಿಯನ್ನು ಹಿರಿಯ ಮಾಹಿತಿ ಸೇವಾ ಅಧಿಕಾರಿ ನಿತಿನ್ ಡಿ ವಾಕಾಂಕರ್ ಅವರು ವಹಿಸಲಿದ್ದಾರೆ. ಗೃಹ ಸಚಿವಾಲಯದ ಮಾಧ್ಯಮ ವಕ್ತಾರರಾಗಿದ್ದ ವಸುಧಾ ಗುಪ್ತಾ ಅವರನ್ನು ಮಾಧ್ಯಮ ಮಾಹಿತಿ ವಿಭಾಗದ ಮಹಾ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.
ಗುಪ್ತಾ ಮತ್ತು ವಾಕಾಂಕರ್ ಇಬ್ಬರೂ ಡಿಜಿ ರ್ಯಾಂಕ್ ಮಟ್ಟದ ಅಧಿಕಾರಿಗಳಾಗಿದ್ದಾರೆ.