ನವದೆಹಲಿ, ಜೂ. 06 (Daijiworld News/MB) : ಒಂದು ದಿನದಲ್ಲೇ ದೇಶದಲ್ಲಿ 9,887 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು 294 ಮಂದಿ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಪ್ರಸ್ತುತ ಕೊರೊನಾ ಸೋಂಕಿತರ ಸಂಖ್ಯೆ 2,36,657 ಕ್ಕೆ ಏರಿಕೆಯಾಗಿದ್ದು 6,642 ಜನರು ಮೃತಪಟ್ಟಿದ್ದಾರೆ. ವಿಶ್ವದಲ್ಲಿ ಕೊರೊನಾ ಬಾಧಿತ ಪಟ್ಟಿಯಲ್ಲಿ ಭಾರತವು ಇಟಲಿಯನ್ನು ಹಿಂದಿಕ್ಕಿ 6 ನೇ ಸ್ಥಾನಕ್ಕೆ ಏರಿದೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದಂತೆಯೇ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಏರಿಕೆಯಾಗಿದ್ದು ಈವರೆಗೆ 1,14,073 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಪ್ರಸ್ತುತ ದೇಶದಲ್ಲಿ 1,15,942 ಪ್ರಕರಣಗಳು ಸಕ್ರಿಯವಾಗಿದೆ.
ದೇಶದಲ್ಲಿ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿರುವ ಮಹಾರಾಷ್ಟ್ರದಲ್ಲಿ 80,229 ಪ್ರಕರಣಗಳು ದಾಖಲಾಗಿದ್ದು 2,849 ಜನರು ಸಾವನ್ನಪ್ಪಿದ್ದಾರೆ. 35,156 ಮಂದಿ ಗುಣಮುಖರಾಗಿದ್ದು 42,224 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ ಈವರೆಗೆ 4,835 ಕೊರೊನಾ ಪ್ರಕರಣಗಳು ದಾಖಲಾಗಿದ್ದು 57 ಜನರು ಸಾವನ್ನಪ್ಪಿದ್ದಾರೆ. 1,688 ಜನರು ಗುಣಮುಖರಾಗಿದ್ದು 3,090 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುಜರಾತ್ನಲ್ಲಿ 19,094, ದೆಹಲಿಯಲ್ಲಿ 26334, ತಮಿಳುನಾಡಿನಲ್ಲಿ 28694, ರಾಜಸ್ತಾನದಲ್ಲಿ 10084, ಉತ್ತರ ಪ್ರದೇಶದಲ್ಲಿ 9733, ಮಧ್ಯಪ್ರದೇಶದಲ್ಲಿ 8996, ಪಶ್ಷಿಮ ಬಂಗಾಳದಲ್ಲಿ 7303 ಕೊರೊನಾ ಪ್ರಕರಣಗಳು ದಾಖಲಾಗಿದೆ.