ತಮಿಳುನಾಡು, ಜೂ 06 (Daijiworld News/MSP): ಎರಡನೇ ಮಗುವು ಹೆಣ್ಣೆಂಬ ಕಾರಣಕ್ಕೆ ನೊಂದು, ಮೂರು ತಿಂಗಳ ಹಸುಗೂಸನ್ನು ಕೊಂದು 34 ವರ್ಷದ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಮೂಂಗಿಲಪಾಳ್ಯಂ ನಿವಾಸಿ ಸಂಗೀತಾ ಆತ್ಮಹತ್ಯೆ ಮಾಡಿಕೊಂಡಿದ್ದು ಈಕೆಗೆ ಈಗಾಗಲೇ 9 ವರ್ಷದ ಹೆಣ್ಣು ಮಗುವಿದೆ. ಗುರುವಾರದಂದು ಪತಿ ಗುಣಶೇಖರ್ ಮನೆಯಿಂದ ಹೊರ ತೆರಳಿದ್ದ ಹಾಗೂ ಅತ್ತೆ ದೊಡ್ಡ ಮೊಮ್ಮಗಳ ಜೊತೆ ಪಕ್ಕದ ಮನೆಗೆ ಹೋಗಿದ್ದ ಸಂದರ್ಭ ನೋಡಿಕೊಂಡು ಬಕೆಟ್ ನೀರಿನಲ್ಲಿ ಮಗುವನ್ನು ಮುಳುಗಿಸಿ ಹಸುಗೂಸನ್ನು ಹತ್ಯೆ ಮಾಡಿದ ಸಂಗೀತಾ ಬಳಿಕ ತಾನು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮತ್ತೊಂದು ಗರ್ಭಿಣಿಯಾಗಿದ್ದ ಆಕೆ, ಗಂಡು ಮಗುವಿನ ನಿರೀಕ್ಷೆಯಲ್ಲಿದ್ದಳು, ಆದರೆ ಮತ್ತೆ ಎರಡನೇ ಮಗುವು ಹೆಣ್ಣಾಗಿರುವುದಕ್ಕೆ ಬೇಸರಗೊಂಡ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.