ಅಮೃತಸರ, ಜೂ. 06 (Daijiworld News/MB) : ಶನಿವಾರ ಪಂಜಾಬಿನ ಅಮೃತಸರದ ಗೋಲ್ಡನ್ ಟೆಂಪಲ್ ಸಂಕೀರ್ಣದಲ್ಲಿ ಆಪರೇಷನ್ ಬ್ಲೂ ಸ್ಟಾರ್ನ 36ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಕೆಲವು ಸಿಖ್ ಮೂಲಭೂತವಾದಿಗಳು ಖಲಿಸ್ತಾನ್ ಪರ ಘೋಷಣೆ ಕೂಗಿದರು.
ವರ್ಷವೂ ಕೂಡಾ ಲಕ್ಷಾಂತರ ಜನರು ಸೇರುತ್ತಿದ್ದ ಈ ಕಾರ್ಯಕ್ರಮದಲ್ಲಿ ಈ ವರ್ಷ ಕೊರೊನಾ ಕಾರಣದಿಂದಾಗಿ 1 ಸಾವಿರಕ್ಕಿಂತ ಅಧಿಕ ಜನರು ಸೇರಿರಲಿಲ್ಲ ಎಂದು ವರದಿಯಾಗಿದ್ದು ಶಿರೋಮಣಿ ಅಕಾಲಿ ದಳದ(ಅಮೃತಸರ) ಅಧ್ಯಕ್ಷ ಮತ್ತು ಮಾಜಿ ಸಂಸದ ಸಿಮ್ರಂಜಿತ್ ಸಿಂಗ್ ಮಾನ್ ಅವರ ಪುತ್ರ ಇಮಾನ್ ಸಿಂಗ್ ಮಾನ್ ಅವರ ನೇತೃತ್ವದಲ್ಲಿ ಸುಮಾರು 100 ಕ್ಕೂ ಹೆಚ್ಚು ಕಾರ್ಯಕರ್ತರು ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗಿದರು ಎನ್ನಲಾಗಿದೆ.
ಈ ಕಾರ್ಯಕ್ರಮದಲ್ಲಿ ಸಿಖ್ ಮೂಲಭೂತವಾದಿ ಸಂಘಟನೆ ದಮ್ಡಾಮಿ ತಕ್ಸಲ್ ಮತ್ತು ಅಕಾಲ್ ತಖ್ತ್ ಜತೇದಾರ್ ಗಿಯಾನಿ ಹರ್ಪ್ರೀತ್ ಸಿಂಗ್ ಮತ್ತು ಶಿರೋಮಣಿ ಗುರುದ್ವಾರ ಪರಬಂಧಕ್ ಸಮಿತಿ ಸದಸ್ಯರು, 1984ರಲ್ಲಿ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರನ್ನು ಹೊರಹಾಕಲು ನಡೆಸಿದ ಆಪರೇಷನ್ ಬ್ಲೂ ಸ್ಟಾರ್ ವೇಳೆ ಹತ್ಯೆಯಾದವರಿಗೆ ಗೌರವ ಸಲ್ಲಿಸಲಾಯಿತು.