ನವದೆಹಲಿ, ಜೂ 06 (DaijiworldNews/PY) : ನಾವು ನಿಮ್ಮ ಆಸ್ಪತ್ರೆಗಳನ್ನು ತೆರೆಯಲು ಅವಕಾಶ ಕೊಟ್ಟಿದ್ದು ಹಣ ಸಂಪಾದನೆ ಮಾಡುವುದಕ್ಕೆ ಅಲ್ಲ. ದೆಹಲಿಯ ಜನರ ಸೇವೆ ಸಲ್ಲಿಸಲು. ಇತರ ಪಕ್ಷಗಳಿಂದ ಪ್ರಭಾವವನ್ನು ಪಡೆದುಕೊಂಡು ಹಣ ಗಳಿಸಲು ಸಾಧ್ಯವಾಗುತ್ತದೆ ಎಂದು ಭಾವಿಸಿದ್ದಾರೆ. ಅಂತಹ ಆಸ್ಪತ್ರೆಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೆಹಲಿಯ ಜನರಿಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ನಿಮ್ಮ ಆಸ್ಪತ್ರೆಗಳನ್ನು ತೆರೆಯಲು ನಾವು ಅವಕಾಶ ಕೊಟ್ಟಿದ್ದು. ಹಣ ಸಂಪಾದನೆ ಮಾಡುವುದಕ್ಕೆ ಅಲ್ಲ. ಕೊರೊನಾದ ಈ ಸಂದಿಗ್ದ ಪರಿಸ್ಥಿತಿಯಲ್ಲಿ ಹೆಚ್ಚಿನ ಆಸ್ಪತ್ರೆಗಳು ರೋಗಿಗಳಿಗೆ ಸಕಾರಾತ್ಮಕವಾದ ಮನೋಭಾವದಿಂದ ಚಿಕಿತ್ಸೆ ನೀಡುತ್ತಿವೆ. ಕೊರೊನಾ ರೋಗಿಗಳಿಗೆ ಪ್ರವೇಶವನ್ನು ಕೆಲವು ಆಸ್ಪತ್ರೆಗಳು ನಿರಾಕರಿಸುತ್ತಿವೆ. ಇತರ ಪಕ್ಷಗಳಿಂದ ಪ್ರಭಾವವನ್ನು ಪಡೆದುಕೊಂಡು ಹಣ ಗಳಿಸುವ ಸಾಧ್ಯತೆ ಎಂದು ಭಾವಿಸಿದ್ದಾರೆ. ಅಂತಹ ಆಸ್ಪತ್ರೆಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಆಸ್ಪತ್ರೆಯ ಹಣ ಗಳಿಕೆಯ ಪ್ರವೃತ್ತಿಯನ್ನು ನಿಗ್ರಹಿಸುವ ಸಲುವಾಗಿ ಪ್ರತಿ ಆಸ್ಪತ್ರೆಯಲ್ಲಿ ದೆಹಲಿ ಸರ್ಕಾರದ ವೈದ್ಯರನ್ನು ನಿಯೋಜನೆ ಮಾಡಲಾಗುತ್ತಿದೆ. ಅಗತ್ಯಗಳ ವಿಚಾರವಾಗಿ ಅವರು ಮಾಹಿತಿಯನ್ನು ನೀಡುವ ಜವಾಬ್ದಾರಿಯನ್ನು ಅವರು ಹೊಂದಿರುತ್ತಾರೆ. ದೆಹಲಿ ಕೊರೊನಾ ಆಸ್ಪತ್ರೆಯಲ್ಲಿ ಹಾಸಿಗೆಗಳ ಲಭ್ಯತೆಯ ಬಗ್ಗೆ ಆ್ಯಪ್ನಲ್ಲಿ ಬಿಡುಗಡೆ ಮಾಡಿ ಸರಿಯಾದ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಇನ್ನು ನಗರದ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಇಲ್ಲ. ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ಒಟ್ಟು 8,645 ಬೆಡ್ಗಳು ಲಭ್ಯವಿದ್ದು, ಈ ಪೈಕಿ 4,038 ಬೆಡ್ಗಳು ಮಾತ್ರ ಭರ್ತಿಯಾಗಿವೆ. ಉಳಿದಂತೆ 4,607 ಬೆಡ್ಗಳು ಖಾಲಿ ಇವೆ. ಇದು ಕೇವಲ ಅಂಕಿ-ಅಂಶಗಳ ಮಾಹಿತಿ ಅಲ್ಲ, ಸ್ಪಷ್ಟವಾದ ಮಾಹಿತಿ. ನಗರದಲ್ಲಿ ಸಾಕಷ್ಟು ಹಾಸಿಗೆಗಳು ಲಭ್ಯವಿದೆ. ನಗರದಲ್ಲಿ ಸಾಕಷ್ಟು ಹಾಸಿಗೆಗಳು ಲಭ್ಯವಿದೆ. ಆದರೆ, ಕೆಲವರು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಅವರ ವಿರುದ್ದ ಸೂಕ್ತವಾದ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.