ನವದೆಹಲಿ, ಜೂ 06 (DaijiworldNews/PY) : ಸರ್ಕಾರ ದೇಶದ ಆರ್ಥಿಕತೆಯನ್ನು ಹಾಳುಗೆಡವುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ಅವರ 2.0 ಆಡಳಿತ ಅವಧಿಯನ್ನು ರಾಕ್ಷಸ 2.0 ಎಂದು ಹೇಳಿರುವ ರಾಹುಲ್ ಗಾಂಧಿ, ಕೊರೊನಾ ಸ್ಥಿತಿಯಿಂದ ಚೇತರಿಸಿಕೊಳ್ಳುದಕ್ಕೆ ಬಡವರಿಗೆ 10,000 ನಗದು ಹಾಗೂ ಎಂಎಸ್ಎಂಇ ಇಂಡಸ್ಟ್ರಿಗೆ ಇಂತಹ ಪರಿಸ್ಥಿತಿಯಿಂದ ಹೊರಬರುವುದಕ್ಕಾಗಿ ಉತ್ತೇಜನ ಪ್ಯಾಕೇಜ್ ಘೋಷಿಸಬೇಕೆಂಬುದು ರಾಹುಲ್ ಗಾಂಧಿ ಅವರ ಬೇಡಿಕೆಯಾಗಿದೆ.