ಲಖನೌ, ಜೂ. 07 (DaijiworldNews/MB) : ದೇಶಾದ್ಯಂತ ಕೊರೊನಾ ಕಾರಣದಿಂದಾಗಿ ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆ ಉಂಟಾಗಿದ್ದು ಗರ್ಭಧಾರಣೆ ಸಂಬಂಧಿಸಿದ ಸಮಸ್ಯೆಯ ಹಿನ್ನಲೆ ಆಸ್ಪತ್ರೆಗಳಿಗೆ ದಾಖಲಾಗಬೇಕಿದ್ದ 8 ತಿಂಗಳ ಗರ್ಭಿಣಿಗೆ ಸ್ಥಳವಾಕಾಶ ದೊರೆಯದೆ 8 ಆಸ್ಪತ್ರೆಗಳಲ್ಲಿ ನಿರಾಕರಿಸಿದ ಕಾರಣ ಆಂಬುಲೆನ್ಸ್ನಲ್ಲೇ ಕೊನೆಯುಸಿರೆಳೆದ ಘಟನೆ ಉತ್ತರ ಪ್ರದೇಶದ ಖೋಡಾದಲ್ಲಿ ನಡೆದಿದೆ.
ಮೃತ ಗರ್ಭಿಣಿ ಮಹಿಳೆ 30 ವರ್ಷದ ನೀಲಂ ನೋಯ್ಡಾ-ಗಾಝಿಯಾಬಾದ್ ಬಳಿಯ ಖೋಡಾ ಕಾಲೊನಿ ನಿವಾಸಿಯಾಗಿದ್ದಾರೆ.
ಈ ಘಟನೆಯ ಬಗ್ಗೆ ಅಳಲು ತೋಡಿಕೊಂಡಿರುವ ಆಕೆಯ ಪತಿ ವಿಜೇಂದರ್ ಸಿಂಗ್ ಅನಾರೋಗ್ಯದ ಕಾರಣದಿಂದ ಇಎಸ್ಐ ಆಸ್ಪತ್ರೆಗೆ ತೆರಳಿದ್ದರು. ಆದರೆ ಅಲ್ಲಿ ಬೆಡ್ ಕೊರತೆ ಹಿನ್ನಲೆಯಲ್ಲಿ ಸ್ಥಳೀಯ ಶಿವಾಲಿಕ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಅಲ್ಲಿಯೂ ಬೆಡ್ ಕೊರತೆ ಇದ್ದ ಕಾರಣ ದಾಖಲಿಸದ ಕಾರಣ ಅಲ್ಲಿಂದ ಸೆಕ್ಟರ್ 3 ರಲ್ಲಿರುವ ಆಸ್ಪತ್ರೆ, ಶಾರದಾ ಆಸ್ಪತ್ರೆ, ಜೇಪೀ ಫೋರ್ಟಿಸ್ ಆಸ್ಪತ್ರೆ ಸೇರಿದಂತೆ 8 ಆಸ್ಪತ್ರೆಗಳಿಗೆ ಗರ್ಭಿಣಿ ಮಹಿಳೆಯನ್ನು ಕರೆದೊಯ್ಯಲಾಗಿದ್ದು, ಎಲ್ಲಾ ಕಡೆಗಳಲ್ಲೂ ಬೆಡ್ಗಳ ಕೊರತೆ ಇದ್ದು ಎಲ್ಲೂ ದಾಖಲು ಮಾಡಲಿಲ್ಲ. 13 ಗಂಟೆಗಳು ಹೀಗೆಯೇ ಅಲೆದಾಡಿದ ಬಳಿಕ ಗ್ರೇಟರ್ ನೋಯ್ಡಾದ ಸರ್ಕಾರಿ ವೈದ್ಯ ವಿಜ್ಞಾನ ಸಂಸ್ಥೆಗೆ ಪತ್ನಿಯನ್ನು ದಾಖಲಿಸಿ ವೆಂಟಿಲೇಟರ್ನಲ್ಲಿ ಇರಿಸಿದದು ಆದರೆ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಪ್ರಕರಣದ ಬಗ್ಗೆ ಮುಖ್ಯ ವೈದ್ಯಾಧಿಕಾರಿ ದೀಪಕ್ ಓಹ್ರಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಮುನೀಂದ್ರನಾಥ್ ಉಪಾಧ್ಯಾಯ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತದೆ. ವರದಿಯ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.