ನವದೆಹಲಿ, ಜೂ. 07 (DaijiworldNews/MB) : ದೇಶದಲ್ಲಿ ಒಂದೇ ದಿನದಲ್ಲಿ 9,971 ಮಂದಿಗೆ ಕೊರೊನಾ ಪಾಸಿಟಿವ್ ಆಗಿದ್ದು ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,46,628 ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 7 ಸಾವಿರದ ಗಡಿಯತ್ತ ಸಮೀಪಿಸಿದ್ದು ಈವರೆಗೆ 6929 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗುವವರ ಸಂಖ್ಯೆ ಕೂಡಾ ಏರಿಕೆಯಾಗುತ್ತಿದ್ದು ಈವರೆಗೆ 2,46,628 ಮಂದಿ ಸೋಂಕಿತರ ಪೈಕಿ 1,15,942 ಗುಣಮುಖರಾಗಿದ್ದು 1,14,072 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇಶದಲ್ಲಿ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿರುವ ಮಹಾರಾಷ್ಟ್ರದಲ್ಲಿ 82968 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು 2969 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 37390 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು 42609 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ 5213 ಮಂದಿಗೆ ಸೋಂಕು ತಗುಲಿದ್ದು 59 ಮಂದಿ ಮೃತಪಟ್ಟಿದ್ದಾರೆ. 3186 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು 1968 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ತಮಿಳುನಾಡಿನಲ್ಲಿ 30152, ದೆಹಲಿಯಲ್ಲಿ 27654, ಗುಜರಾತ್ನಲ್ಲಿ 19592, ರಾಜಸ್ತಾನದಲ್ಲಿ 10331, ಉತ್ತರ ಪ್ರದೇಶದಲ್ಲಿ 9733,ಮಧ್ಯಪ್ರದೇಶದಲ್ಲಿ 9228, ಪಶ್ಚಿಮ ಬಂಗಾಳದಲ್ಲಿ 7738 ಕೊರೊನಾ ಪ್ರಕರಣ ಪತ್ತೆಯಾಗಿದ್ದು ದೇಶದಲ್ಲೇ ಮೊದಲ ಕೊರೊನಾ ಪ್ರಕರಣ ಪತ್ತೆಯಾದ ಕೇರಳದಲ್ಲಿ 1807 ಪ್ರಕರಣಗಳು ದಾಖಲಾಗಿದೆ.