ಬೆಂಗಳೂರು, ಜೂ. 07 (DaijiworldNews/MB) : ನಟಿ ಚಂದನಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾದ ಆಕೆಯ ಪ್ರಿಯಕರ ದಿನೇಶ್ನನ್ನು ಪೊಲೀಸರು ಬಂಧಿಸಿದ್ದಾರೆ.
ಜೂನ್ 1 ರಂದು 29 ವರ್ಷದ ನಟಿ ಚಂದನಾ ತಾವರೆಕೆರೆಯ ಕೃಷ್ಣಮೂರ್ತಿ ಲೇಔಟ್ನಲ್ಲಿ ತನ್ನ ಮನೆಯಲ್ಲಿ ತಾನು ಸೆಲ್ಫಿ ವಿಡಿಯೋ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಂದರ್ಭದಲ್ಲಿ ತನ್ನ ಪ್ರಿಯಕರ ದಿನೇಶ್ ತನ್ನನ್ನು ವಿವಾಹವಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ. ದಿನೇಶ್ ಮನೆಗೆ ನನ್ನ ಕುಟುಂಬಸ್ಥರು ಮದುವೆ ಪ್ರಸ್ತಾಪ ಮಾತುಕತೆಗೆ ತೆರಳಿದ್ದು ಆದರೆ, ದಿನೇಶ್ ತಾಯಿ ಗಾಯತ್ರಿ, ಮಾವ ದಯಾನಂದ ಎಂಬುವವರು ಚಂದನಾ ಕ್ಯಾರೆಕ್ಟರ್ ಸರಿಯಿಲ್ಲ, ನಿಮ್ಮ ಹುಡುಗಿಯನ್ನು ಸರಿಯಾಗಿ ನೋಡಿಕೊಳ್ಳಿ ಎಂದು ಹೇಳಿ ಅವಮಾನ ಮಾಡಿ ಕಳಿಸಿದ್ದಾರೆ. ಈ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರು.
ಇನ್ನು ಆರೋಪಿ ದಿನೇಶ್ ಹಾಗೂ ಚಂದನಾ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದು ವಿವಾಹವಾಗುವುದಾಗಿ ನಂಬಿಸಿ 5 ಲಕ್ಷ ಪಡೆದಿದ್ದ ಹಾಗೂ ದೈಹಿಕವಾಗಿ ಚಂದನಾರನ್ನು ಬಳಸಿಕೊಂಡಿದ್ದ ಎಂದು ದೂರು ನೀಡಲಾಗಿತ್ತು.