ಗಂಗಾವತಿ, ಜೂ. 07 (DaijiworldNews/MB) : ಶಾಸಕರೊಬ್ಬರ ಖಾತೆಯನ್ನು ಹ್ಯಾಕ್ ಮಾಡಿರುವ ಖದೀಮರು ಅವರ ಫೇಸ್ಬುಕ್ನಲ್ಲೇ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುವಂತೆ ಹೇಳಿದ್ದು ಈ ಕುರಿತಾಗಿ ಶಾಸಕರೇ ಪೊಲೀಸರಿಗೆ ದೂರು ನೀಡಿದ್ದಾರೆ.
ಶಾಸಕ ಪರಣ್ಣ ಮುನವಳ್ಳಿ ಅವರ ಫೇಸ್ ಬುಕ್ ಖಾತೆಯನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದು ಈ ಬಗ್ಗೆ ಮಾಹಿತಿ ನೀಡಿರುವ ಅವರು, ಜನರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಫೇಸ್ಬುಕ್, ವಾಟ್ಸಾಪ್ ,ಟ್ವಿಟರ್, ಇನ್ಸ್ಟಾ ಗ್ರಾಮ್ ಬಳಸಲಾಗುತ್ತಿದ್ದು ಜೂ.06 ರಂದು ಯಾರೋ ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಬ್ಯಾಂಕ್ ಅಂಕೌಂಟ್ಗೆ ಹಣ ಹಾಕಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಶಾಸಕರು ಫೇಸ್ಬುಕ್ ಮೆಸೇಜ್ ನೋಡಿ ಯಾರೂ ಕೂಡಾ ಅಕೌಂಟ್ಗೆ ಹಣ ಜಮೆ ಮಾಡಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.