ಮನಾಲಿ, ಜೂ. 07 (DaijiworldNews/MB) : ಕೇರಳದ ಪಾಲಕ್ಕಾಡ್ನಲ್ಲಿ ಪಟಾಕಿ ತುಂಬಿದ ಅನಾನಸ್ ತಿಂದು ಸಾವನ್ನಪ್ಪಿದ್ದ ಗರ್ಭಿಣಿ ಆನೆ ಸಾವನ್ನಪ್ಪಿದ ಬಳಿಕ ಅಂತಹದ್ದೇ ಘಟನೆ ಹಿಮಾಚಲ ಪ್ರದೇಶದಲ್ಲಿಯೂ ನಡೆದಿದ್ದು ಗೋಧಿಹಿಟ್ಟಿನ ಪಟಾಕಿ ಸುತ್ತಿ ಇಟ್ಟಿದ್ದ ಉಂಡೆ ತಿಂದ ಗರ್ಭಿಣಿ ಹಸುವಿನ ದವಡೆ ಸಂಪೂರ್ಣವಾಗಿ ಸ್ಫೋಟಗೊಂಡಿದ್ದು ಆರೋಪಿಯನ್ನು ಬಂಧನ ಮಾಡಲಾಗಿದೆ.
ಬಂಧಿತ ಆರೋಪಿ ನೆರೆ ಮನೆಯ ನಂದ್ ಲಾಲ್ ಎಂದು ಗುರುತಿಸಲಾಗಿದೆ.
ಗರ್ಭಿಣಿ ಹಸುವಿಗೆ ಚಿಕಿತ್ಸೆ ನೀಡಲಾಗಿದ್ದು ಹಸು ಕರುವಿಗೆ ಜನ್ಮ ನೀಡಿದೆ.
ಈ ಘಟನೆಯ ವಿಡಿಯೋವನ್ನು ಹಸುವಿನ ಮಾಲಕ ಗುರ್ಡಿಯಲ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು #JusticeforNandini ಎಂದು ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ.
ಇನ್ನು ಈ ಘಟನೆಯನ್ನು ಖಂಡಿಸಿರುವ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಆರೋಪಿಗಳ ಮೇಲೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಹೇಳಿದ್ದಾರೆ.
ಹಿಮಾಚಲ ಪ್ರದೇಶದ ರೈತರು ತಮ್ಮ ಜಮೀನುಗಳಲ್ಲಿ ಬೆಳೆಗಳಿಗೆ ಹಾನಿಯನ್ನುಂಟುಮಾಡುವ ನೀಲಿ ಎತ್ತುಗಳಂತಹ ಕಾಡು ಪ್ರಾಣಿಗಳ ಹಾವಳಿಯನ್ನು ತಪ್ಪಿಸಲು ಗೋಧಿ ಹಿಟ್ಟಿನಲ್ಲಿ ಪಟಾಕಿ, ಸಿಡಿಮದ್ದುಗಳನ್ನು ಸುತ್ತಿ ಇಡುವುದು ಸಾಮಾನ್ಯವಾಗಿದೆ ಎನ್ನಲಾಗಿದೆ.