ರಾಯಚೂರು, ಜೂ. 07 (DaijiworldNews/MB) : ಮಂತ್ರಾಲಯದಲ್ಲಿ ದರ್ಶನಾವಕಾಶ ಬಗ್ಗೆ ಮಾಹಿತಿ ಸಂಗ್ರಹಿಸಲೆಂದು ಹೋಗಿ ವಾಪಾಸ್ ಆಗಿರುವ ಇಬ್ಬರು ಪತ್ರಕರ್ತರು ಹಾಗೂ ಇಬ್ಬರು ವಿಡಿಯೋಗ್ರಾಫರ್ಗಳು ಹೋಂ ಕ್ವಾರಂಟೈನ್ಗೆ ಒಳಗಾಗುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿರುವ ಮಂತ್ರಾಲಯಕ್ಕೆ ಪತ್ರಕರ್ತರು ಹಾಗೂ ವಿಡಿಯೋಗ್ರಾಫರ್ ಹೋಗಿ ಬಂದಿದ್ದು ಇದು ಹೊರ ರಾಜ್ಯವಾದ ಕಾರಣ ಅವರನ್ನು ಹೋಂ ಕ್ವಾರಂಟೈನ್ಗೆ ಒಳಗಾಗುವಂತೆ ಸೂಚನೆ ನೀಡಿರುವ ಜಿಲ್ಲಾಡಳಿತ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ತಿಳಿಸಲಾಗಿದೆ.