ಬೆಂಗಳೂರು, ಜೂ.08 (DaijiworldNews/MB) : ಭಾನುವಾರ ನಗರದಲ್ಲಿ ನಿಧನರಾದ ಖ್ಯಾತ ಚಿತ್ರನಟ ಚಿರಂಜೀವಿ ಸರ್ಜಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ಬಸವನಗುಡಿಯ ನಿವಾಸದಲ್ಲಿ ಮಧ್ಯಾಹ್ನ ಒಂದು ಗಂಟೆಯವರೆಗೆ ಇಡಲಾಗುತ್ತಿದ್ದು ಮೂರು ಗಂಟೆಗೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ವರದಿಯಾಗಿದೆ.
ಚಿರಂಜೀವಿ ಸರ್ಜಾ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರದ ಸಿದ್ಧತೆಗಳು ಸಹೋದರ ಧ್ರುವ ಸರ್ಜಾ ಅವರ ತೋಟದಲ್ಲಿ ಆರಂಭಿಸಲಾಗಿದೆ.
ಇನ್ನು ಸಿನಿಮಾ ರಂಗದ ಹಿರಿಯರಾದ ದೊಡ್ಡಣ್ಣ, ನಿರ್ಮಾಪಕ ಕೆ. ಮಂಜು ಮತ್ತಿತರರು ಚಿರು ಅವರ ಪಾರ್ಥಿವ ಶರೀರದ ದರ್ಶನ ಪಡೆದಿದ್ದಾರೆ.