ನವದೆಹಲಿ, ಜೂ.08 (DaijiworldNews/MB) : ಭಾರತದಲ್ಲಿ ಒಂದೇ ದಿನದಲ್ಲಿ 9,983 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು 206 ಮಂದಿ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಸೋಂಕಿತರ ಸಂಖ್ಯೆ 2,56,611 ಲಕ್ಷಕ್ಕೇರಿದ್ದು ಒಟ್ಟು 7,135 ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ.
ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸೋಂಕಿನಿಂದ ಗುಣಮುಖರಾಗುತ್ತಿರುವ ಸಂಖ್ಯೆಯೂ ಅಧಿಕವಾಗುತ್ತಿದ್ದು ಈವರೆಗೆ 1,24,095 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1,25,381 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇಶದಲ್ಲೇ ಅತೀ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿರುವ ಮಹಾರಾಷ್ಟ್ರದಲ್ಲಿ 85975 ಮಂದಿಗೆ ಸೋಂಕು ತಗುಲಿದ್ದು 3060 ಮಂದಿ ಮೃತಪಟ್ಟಿದ್ದಾರೆ. 39314 ಮಂದಿ ಗುಣಮುಖರಾಗಿದ್ದು 43601 ಸಕ್ರಿಯ ಪ್ರಕರಣಗಳಾಗಿವೆ. ಕರ್ನಾಟಕದಲ್ಲಿ 5452 ಮಂದಿಗೆ ಸೋಂಕು ದೃಢಪಟ್ಟಿದ್ದು 61 ಮಂದಿ ಸಾವನ್ನಪ್ಪಿದ್ದಾರೆ. 3259 ಸಕ್ರಿಯ ಪ್ರಕರಣಗಳಾಗಿದ್ದು 2132 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ತಮಿಳುನಾಡಿನಲ್ಲಿ 31667, ದೆಹಲಿಯಲ್ಲಿ 27654, ಗುಜರಾತ್ನಲ್ಲಿ 20070, ರಾಜಸ್ತಾನದಲ್ಲಿ 10599, ಉತ್ತರ ಪ್ರದೇಶದಲ್ಲಿ 10536, ಮಧ್ಯಪ್ರದೇಶದಲ್ಲಿ 9401, ಪಶ್ಚಿಮ ಬಂಗಾಳದಲ್ಲಿ 8187 ಕೊರೊನಾ ಪ್ರಕರಣ ಪತ್ತೆಯಾಗಿದ್ದು ದೇಶದಲ್ಲೇ ಮೊದಲ ಕೊರೊನಾ ಪ್ರಕರಣ ಪತ್ತೆಯಾದ ಕೇರಳದಲ್ಲಿ 1914 ಪ್ರಕರಣಗಳು ದಾಖಲಾಗಿದೆ.