ಭೋಪಾಲ್, ಜೂ 08 (DaijiworldNews/PY) : ಚಿಕಿತ್ಸೆಯ ಬಿಲ್ ಅನ್ನು ಪಾವತಿಸಿಲ್ಲ ಎಂದು ಆರೋಪಿಸಿ 80 ವರ್ಷ ಪ್ರಾಯದ ವೃದ್ಧರನ್ನು ಬೆಡ್ನಲ್ಲಿ ಕಟ್ಟಿ ಹಾಕಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಶಾಜಾಪುರದ ಆಸ್ಪತ್ರೆಯಲ್ಲಿ ನಡೆದಿದೆ.
ಈ ವಿಚಾರವು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೂ ತಲುಪಿದ್ದು, ವೃದ್ದರಿಗೆ ನ್ಯಾಯ ದೊರಕಿಸಲಾಗುತ್ತದೆ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಪೊಲೀಸರೂ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಸಂದರ್ಭ ಹಿರಿಯ ಅಧಿಕಾರಿಗಳನ್ನು ಆಸ್ಪತ್ರೆಗೆ ಕಳುಹಿಸಿದ ಜಿಲ್ಲಾಧಿಕಾರಿ ವೀರೇಂದ್ರ ಸಿಂಗ್ ರಾವತ್ ಅವರು ವರದಿ ನೀಡುವಂತೆ ಆದೇಶ ನೀಡಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ವೃದ್ದ, ಆಸ್ಪತ್ರೆಗೆ ದಾಖಲಾಗುವ ಸಂದರ್ಭ 5 ಸಾವಿರ ರೂ.ಪಾವತಿ ಮಾಡಿದ್ದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಂದರ್ಭ 11,000 ರೂ. ಪಾವತಿ ಮಾಡಲು ತಿಳಿಸಲಾಯಿತು. ನನ್ನ ಬಳಿ ಅಷ್ಟು ಹಣ ಇಲ್ಲದ ಕಾರಣ ಬೆಡ್ಗೆ ಕಟ್ಟಿದ್ದರು ಎಂದು ಹೇಳಿದ್ದಾರೆ.
ಆರೋಪವನ್ನು ತಳ್ಳಿ ಹಾಗಿದ ಆಸ್ಪತ್ರೆ, ವೃದ್ದರಿಗೆ ಸ್ನಾಯುಗಳ ಮೇಲಿನ ನಿಯಂತ್ರಣ ಸಮಸ್ಯೆಯಿತ್ತು. ಅವರನ್ನೇ ಅವರು ತೊಂದರೆಗೀಡು ಮಾಡಿಕೊಳ್ಳುವ ಸಾಧ್ಯತೆಗಳಿದ್ದ ಕಾರಣ ಅವರನ್ನು ಮಂಚಕ್ಕೆ ಕಟ್ಟಿಹಾಕಲಾಯಿತು ಎಂದು ತಿಳಿಸಿದೆ.