ಅಯೋಧ್ಯೆ, ಜೂ 08 (Daijiworld News/MSP): ಕುಬರ್ ತಿಲ ದೇವಸ್ಥಾನದಲ್ಲಿ ಜೂನ್.10 ಶಿವನಿಗೆ ರುದ್ರಾಭಿಷೇಕ ಮಾಡುವ ಮೂಲಕ ‘ರಾಮಮಂದಿರ’ ನಿರ್ಮಾಣ ಕಾರ್ಯ ಆರಂಭ ವಾಗಲಿದೆ ಎಂದು ರಾಮ ಮಂದಿರ ಕಮಿಟಿಯ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಹೇಳಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಸುಪ್ರಿಂ ಕೋರ್ಟ್ ಅಸ್ತು ಎಂದಿದ್ದರೂ , ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆ ಕಳೆದ 2 ತಿಂಗಳಿಗಿಂತ ಅಧಿಕ ಕಾಲ ದೇಶವ್ಯಾಪ್ತಿ ಲಾಕ್ ಡೌನ್ ಘೋಷಣೆ ರಾಮಮಂದಿರ ನಿರ್ಮಾಣ ಕಾರ್ಯ ಚಾಲನೆ ಸಿಗುವುದು ಕೊಂಚ ತಡವಾಗಿತ್ತು. ಆದರೀಗ ಜೂನ್ 10 ರ ಬುಧವಾರದಿಂದ ರಾಮಮಂದಿರ’ ನಿರ್ಮಾಣ ಕಾರ್ಯ ಆರಂಭ ವಾಗಲಿದೆ .
ಈಗಾಗಲೇ ಮಂದಿರ ನಿರ್ಮಾಣ ಮಾಡಲು ನೆಲಸಮತಟ್ಟು ಮಾಡುವ ಕೆಲಸ ಮುಗಿದಿದ್ದು, ಬುಧವಾರದಿಂದ ಮಂದಿರ ನಿರ್ಮಾಣಕ್ಕೆ ಅಧಿಕೃತ ಚಾಲನೆ ಸಿಗಲಿದೆ .