ಜೈಪುರ, ಜೂ 08 (DaijiworldNews/PY) : ರಾಜ್ಯಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಗುಜರಾತ್ನಲ್ಲಿ ವಿಪಕ್ಷ ಕಾಂಗ್ರೆಸ್ಗೆ ಮೂವರು ಶಾಸಕರು ರಾಜೀನಾಮೆ ನೀಡಿದ್ದು, ಬಿಜೆಪಿಯು ಮತ್ತಷ್ಟು ಮಂದಿಯನ್ನು ಸೆಳೆಯುವುದನ್ನು ತಪ್ಪಿಸುವ ಸಲುವಾಗಿ ಪಕ್ಷದ ವರಿಷ್ಠ ಮಂಡಳಿ 65 ಮಂದಿ ಶಾಸಕರನ್ನು ರೆಸಾರ್ಟ್ಗೆ ಕಳುಹಿಸಿದೆ.
ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮಿತ್ ಚವಡಾ ಅವರು ಬೆಳವಣಿಗೆ ವಿರುದ್ದ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಕೊರೊನಾ ವೈರಸ್ನಿಂದಾಗಿ ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಈ ಸಂದರ್ಭ ಜನರ ಯೋಗ ಕ್ಷೇಮವನ್ನು ಸರ್ಕಾರ ವಿಚಾರಿಸಬೇಕು. ಆದರೆ, ಇದರ ಬದಲಾಗಿ ಶಾಸಕರ ಖರೀದಿ ಹಾಗೂ ಅವರನ್ನು ಬೆದರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ದೂರಿದ್ದಾರೆ.
ರಾಜ್ಕೋಟ್ನಲ್ಲಿ ಶಾಸಕರು ತಂಗಿರುವ ರೆಸಾರ್ಟ್ನ ವಿರುದ್ದ ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡಿದ ಆರೋಪದ ಹಿನ್ನೆಲೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಈ ಮಧ್ಯೆ, ಭಾನುವಾರ ರಾಜಸ್ಥಾನದ ಸಿರೋಹಿ ಜಿಲ್ಲೆಯ ಅಬುರಸ್ತೆ ಬಳಿಯ ರೆಸಾರ್ಟ್ಗೆ 21 ಶಾಸಕರನ್ನು ಸ್ಥಳಾಂತರಿಸಲಾಗಿದ್ದು, ಸೋಮವಾರ ಇನ್ನಷ್ಟು ಶಾಸಕರನ್ನು ಈ ರೆಸಾರ್ಟ್ಗೆ ಸೇರಿಸಿಕೊಳ್ಳುವ ಸಾಧ್ಯೆ ತೆ ಇದೆ ಎಂಬುದಾಗಿ ಭಾನುವಾರ ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.