ಬೆಂಗಳೂರು, ಜೂ.08 (DaijiworldNews/MB) : ರಾಜ್ಯಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿಯವರಿಗೆ ಅಭ್ಯರ್ಥಿಗಳಾಗಿ ಆಯ್ಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ.
ರಾಜ್ಯ ಸಭಾ ಚುನಾವಣೆ ಟಿಕೆಟ್ಗಾಗಿ ಬಿಜೆಪಿಯಲ್ಲಿ ಭಾರಿ ಪೈಪೋಟಿ ನಡೆದಿದ್ದು ಈ ಮೊದಲು ರಾಜ್ಯ ಕೋರ್ ಕಮಿಟಿ ರಮೇಶ್ ಕತ್ತಿ, ಪ್ರಭಾಕರ ಕೋರೆ, ಕೆ ಪ್ರಕಾಶ್ ಶೆಟ್ಟಿಯವರ ಹೆಸರನ್ಜು ನವದೆಹಲಿಗೆ ಶಿಫಾರಸ್ಸು ಮಾಡಿತ್ತು. ಆದರೆ ಇದೀಗ ಬೇರೆಯೇ ಇಬ್ಬರು ಅಭ್ಯರ್ಥಿಗಳನ್ನು ಈಗ ಆಯ್ಕೆ ಮಾಡಲಾಗಿದೆ.
ಶಾಸಕ ಉಮೇಶ್ ಕತ್ತಿಯವರು ತನ್ನ ಸಹೋದರ ರಮೇಶ್ ಕತ್ತಿಯವರನ್ನು ಬಿಜೆಪಿಯಿಂದ ಅಭ್ಯರ್ಥಿಯಾಗಿ ಆಯ್ಕೆ ಮಾಡಬೇಕು ಎಂದು ಬಹಳ ಒತ್ತಡ ಹೇರಿದ್ದರು. ಅಷ್ಟು ಮಾತ್ರವಲ್ಲದೇ ಹಾಲಿ ರಾಜ್ಯಸಭಾ ಸಂಸದ ಪ್ರಭಾಕರ ಕೋರೆ ಕೂಡಾ ಪುನಾರಯ್ಕೆ ಬಯಸಿದ್ದರು. ಕೊನೆಯ ಕ್ಷಣದಲ್ಲಿ ಕರಾವಳಿ ಕರ್ನಾಟಕದ ಹೋಟೆಲ್ ಉದ್ಯಮಿ ಕೆ ಪ್ರಕಾಶ್ ಶೆಟ್ಟಿಯವರನ್ನು ಆಯ್ಕೆ ಮಾಡಬೇಕು ಎಂಬ ಒತ್ತಡ ಕೂಡಾ ಹೇರಲಾಗಿತ್ತು.