ದೆಹಲಿ, ಜೂ 08 (Daijiworld News/MSP): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅನಾರೋಗ್ಯದಿಂದ ಬಳಲುತ್ತಿದ್ದು, ಕೊರೊನಾವೈರಸ್ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ತಿಳಿದುಬಂದಿದೆ.
ಗಂಟಲು ನೋವು, ಲಘು ಜ್ವರ ಹಾಗೂ ಕೆಮ್ಮುವಿನಿಂದ ಬಳಲುತ್ತಿರುವ ಕಾರಣ, ಆಮ್ ಆದ್ಮಿ ಪಕ್ಷದ(ಎಎಪಿ) ಮುಖ್ಯಸ್ಥರಾದ ಅರವಿಂದ್ ಕ್ರೇಜಿವಾಲ್ ಸ್ವತಃ ಐಸೋಲೇಶನ್ಗೆ ಒಳಗಾಗಿದ್ದು, ಕೋವಿಡ್-19 ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಪಕ್ಷದ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಭಾನುವಾರ ಸಂಜೆ ಆನ್ಲೈನ್ ಮೂಲಕ ಮಾಧ್ಯಮಗಳಿಗೆ ವಿವರಣೆ ನೀಡುವ ಸಲುವಾಗಿ ಕೊನೆ ಬಾರಿ ಕಾಣಿಸಿಕೊಂಡಿದ್ದರು. ಆ ಬಳಿಕ ಅನಾರೋಗ್ಯ ಕಾರಣದಿಂದ ತಮ್ಮ ಎಲ್ಲಾ ಸಭೆಗಳನ್ನು ರದ್ದುಗೊಳಿಸಿದ್ದಾರೆ.
ದೆಹಲಿಯಲ್ಲಿ ಒಟ್ಟು 28,936 ಕರೋನವೈರಸ್ ಪ್ರಕರಣಗಳು ದಾಖಲಾಗಿದ್ದು, ಈವರೆಗೆ 812 ಜನರು ಸಾವನ್ನಪ್ಪಿದ್ದಾರೆ. ಏತನ್ಮಧ್ಯೆ, ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,56,611ಕ್ಕೆ ತಲುಪಿದೆ. ಈ ಪೈಕಿ 1,25,381 ಸಕ್ರಿಯ ಪ್ರಕರಣವಾಗಿದೆ.