ನವದೆಹಲಿ ಜೂ 08 (Daijiworld News/MSP): "ದೇಶದ ಗಡಿಯಲ್ಲಿ ಏನು ನಡೆಯುತ್ತಿದೆ ಎಂಬುದರ ಸತ್ಯಾಂಶ ಎಲ್ಲರಿಗೂ ತಿಳಿದಿದೆ" ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಗೃಹ ಸಚಿವ ಅಮಿತ್ ಶಾ ಅವರ ಗಡಿಗಳನ್ನು ರಕ್ಷಣೆ ನೀತಿ ಬಗ್ಗೆ ವ್ಯಂಗ್ಯವಾಡಿದ್ದಾರೆ.
ನಿನ್ನೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಬಿಹಾರ ಜನಸಮ್ವದ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಭಾರತದ ರಕ್ಷಣಾ ನೀತಿ ಪ್ರಬಲವಾಗಿದೆ ಮತ್ತು ದೇಶವು ತನ್ನ ಗಡಿಗಳನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ತಿಳಿದಿದೆ ಅಮೆರಿಕ ಮತ್ತು ಇಸ್ರೇಲ್ ನಂತರ ಭಾರತವು ತನ್ನ ಗಡಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಏಕೈಕ ದೇಶವಾಗಿದೆ ಎಂದು ಹೇಳಿದ್ದರು.
ಇದಕ್ಕೆ ಟ್ವೀಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ರಾಹುಲ್, "ಎಲ್ಲರಿಗೂ ಗಡಿಯ ವಾಸ್ತವತೆ ಚೆನ್ನಾಗಿಯೇ ತಿಳಿದಿದೆ, ಆದರೆ ಸರ್ಕಾರವನ್ನು ಸಂತೋಷವಾಗಿಡುವ ಅಲೋಚನೆ ಒಳ್ಳೆಯದು" ಎಂದಿದ್ದಾರೆ.
ಅಮಿತ್ ಶಾ ಅವರು, ಭಾರತದ ರಕ್ಷಣಾ ನೀತಿ ಜಾಗತಿಕ ಒಪ್ಪಿಗೆಯನ್ನು ಗಳಿಸಿದೆ. ಯುಎಸ್ಎ ಮತ್ತು ಇಸ್ರೇಲ್ ನಂತರ ತನ್ನ ಗಡಿಗಳನ್ನು ರಕ್ಷಿಸಲು ಸಮರ್ಥವಾಗಿರುವ ಬೇರೆ ದೇಶವಿದ್ದರೆ ಅದು ಭಾರತ . ಮೋದಿ ನೇತೃತ್ವದ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ಮತ್ತು ವಾಯುದಾಳಿ ನಡೆಸುವ ಮೂಲಕ ಧೈರ್ಯ ತೋರಿಸಿದರು. ಭಾರತವು ತನ್ನ ಗಡಿಗಳನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಇಂದು ಜಗತ್ತು ಒಪ್ಪಿದೆ ಎಂದು ಹೇಳಿದ್ದರು.
ಅಮಿತ್ ಷಾ ಅವರ ಈ ಹೇಳಿಕೆಯ ಬಗ್ಗೆ ಸೋಮವಾರ ಹಿಂದಿಯಲ್ಲಿ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ "ಸೀಮಾ"(ಗಡಿ) ವಾಸ್ತವತೆ ಎಲ್ಲರಿಗೂ ತಿಳಿದಿದೆ ಆದರೆ ಹೃದಯವನ್ನು ಸಂತೋಷವಾಗಿಡುವ ಕಲ್ಪನೆ 'ಶಾ-ಯಾದ್' ಒಳ್ಳೆಯದು "ಎಂದು ಟ್ವೀಟ್ ಮಾಡಿದ್ದಾರೆ