ಮುಂಬೈ, ಜೂ 08 (DaijiworldNews/PY) : ಶೀಘ್ರದಲ್ಲೇ ಯಂತ್ರಗಳ ಯಾವುದೇ ಭಾಗಗಳನ್ನು ಮುಟ್ಟದೇ ಎಟಿಎಂನಿಂದ ಹಣವನ್ನು ಡ್ರಾ ಮಾಡಲು ಸಾಧ್ಯವಾಗಲಿದೆ. ನಗದು ಹಾಗೂ ಡಿಜಿಟಲ್ ಪಾವತಿಯ ಪರಿಹಾರಗಳನ್ನು ಹಾಗೂ ಯಾಂತ್ರೀಕೃತಗೊಂಡ ತಂತ್ರಜ್ಞಾನವನ್ನು ಒದಗಿಸುವ ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್, ಕೊರೊನಾದ ಈ ಸಂದರ್ಭ ಟಚ್ಲೆಸ್ ಎಟಿಎಂ ಪರಿಹಾರವನ್ನು ಯಶಸ್ವಿಯಾಗಿ ಅಭಿವೃದ್ದಿ ಪಡಿಸಿದೆ ಹಾಗೂ ಪರೀಕ್ಷಿಸಿದೆ ಎಂದು ಸೋಮವಾರ ತಿಳಿಸಿದೆ.
ಪ್ರಸ್ತುತ, ಆಸಕ್ತ ಬ್ಯಾಂಕ್ಗಳಲ್ಲಿ ಡೆಮೊ ಅಡಿಯಲ್ಲಿರುವ ಕಾಂಟ್ಯಾಕ್ಟ್ಲೆಸ್ ಪರಿಹಾರವು ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಎಟಿಎಂನಿಂದ ಹಣವನ್ನು ಹಿಂಪಡೆಯಲು ಅಗತ್ಯವಿರುವ ಎಲ್ಲಾ ಹಂತಗಳನ್ನು ನಿರ್ವಹಿಸಲು ಗ್ರಾಹಕರಿಗೆ ಅನುವು ಮಾಡಿಕೊಡಲಿದೆ.
ಗ್ರಾಹಕರು ಎಟಿಎಂನ ಪರದೆಯಲ್ಲಿ ನೀಡಲಾದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು ಹಾಗೂ ಆಯಾ ಬ್ಯಾಂಕ್ನ ಮೊಬೈಲ್ ಅಪ್ಲಿಕೇಶನ್ನಲ್ಲಿನ ನಿರ್ದೇಶನಗಳನ್ನು ಅನುಸರಿಸಬೇಕು. ಎಟಿಎಂನಿಂದ ಹಣವನ್ನು ವಿತರಿಸಲು ಬೇಕಾದ ಮೊತ್ತ ಹಾಗೂ ಎಂಪಿಎನ್ ಅನ್ನು ಇದರಲ್ಲಿ ನಮೂದಿಸಬೇಕು.
ಕಂಪೆನಿಯ ಪ್ರಕಾರ, ಕ್ಯೂಆರ್ ಕೋಡ್ನಿಂದಾಗಿ ಹಣವನ್ನು ಪಡೆದುಕೊಳ್ಳಲು ಸಹಕಾರಿಯಾಗಿದೆ ಹಾಗೂ ಹೆಚ್ಚು ಸುರಕ್ಷಿತವಾದೆ ಎಂದು ತಿಳಿಸಿದೆ.
ಹೊಸ ಟಚ್ಲೆಸ್ ಎಟಿಎಂನ ಈ ವಿಧಾನವು ಕ್ಯೂಆರ್ ನಗದು ಪರಿಹಾರದ ವಿಸ್ತರಣೆಯಾಗಿದ್ದು, ಅದು ಬಳಕೆದಾರರ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ ಹಾಗೂ ಸುರಕ್ಷತೆಯೊಂದಿಗೆ ತಡೆರಹಿತವಾದ ಹಣವನ್ನು ಹಿಂತೆಗೆದುಕೊಳ್ಳುವ ಅನುಭವವನ್ನು ನೀಡುತ್ತದೆ ಎಂದು ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ಲಿಮಿಟೆಡ್ನ ಅಧ್ಯಕ್ಷ ಮತ್ತು ಎಂಡಿ ರವಿ ಬಿ. ಗೋಯಲ್ ಹೇಳಿದರು.
ಇನ್ನು ಕನಿಷ್ಠ ಹೂಡಿಕೆಯೊಂದಿಗೆ ಬ್ಯಾಂಕ್ಗಳು ಅಸ್ತಿತ್ವದಲ್ಲಿರುವ ಸಾಫ್ಟ್ವೇರ್ ಅನ್ನು ಅಪ್ಗ್ರೇಡ್ ಮಾಡುವ ಮೂಲಕ ತಮ್ಮ ಎಟಿಎಂ ನೆಟ್ವರ್ಕ್ಗಳಿಗೆ ಇದನ್ನು ಸಕ್ರಿಯಗೊಳಿಸಬಹುದಾಗಿದೆ.
ಎಜಿಎಸ್ಟಿಟಿಎಲ್ ದೇಶಾದ್ಯಂತ ಇದುವರೆಗೆ ಎಟಿಎಂಗಳನ್ನು ಸ್ಥಾಪಿಸಿದ್ದು, 72,000 ಎಟಿಎಂಗಳನ್ನು ನಿರ್ವಹಿಸಿದೆ ಹಾಗೂ ಪ್ರಮುಖ ಬ್ಯಾಂಕ್ಗಳಿಗಎ ಕಸ್ಟಮೈಸ್ ಪರಿಹಾರಗಳನ್ನು ಒದಗಿಸಿದೆ. ಕಂಪೆನಿಯು ಈ ಹಿಂದೆ ಯುಪಿಐ-ಕ್ಯೂಆರ್ ಆಧಾರಿತ ನಗದು ಹಿಂಪಡೆಯುವಿಕೆಯ ಪರಿಹಾರವನ್ನು ಬ್ಯಾಂಕ್ ಆಫ್ ಇಂಡಿಯಾದ ಸಹಭಾಗಿತ್ವದಲ್ಲಿ ಪರಿಚಯಿಸಿದೆ.